ಸಲಾಡ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ವಿಷಯ ಎಲ್ಲರಿಗೂ ತಿಳಿದಿದೆ.
ಹಣ್ಣುಗಳಿಂದ ತರಕಾರಿಗಳಿಂದ ಸಲಾಡ್ ಮಾಡಿ ತಿನ್ನಲಾಗುತ್ತದೆ. ಆದ್ರೆ ಸಲಾಡ್ ತಿನ್ನುವ ಸರಿಯಾದ ವಿಧಾನ ತಿಳಿಯದ ಕಾರಣ ಅದ್ರ ಪೌಷ್ಠಿಕಾಂಶ ದೇಹವನ್ನು ಸರಿಯಾಗಿ ಸೇರುವುದಿಲ್ಲ.
ಸಲಾಡನ್ನು ಯಾವಾಗ್ಲೂ ಊಟಕ್ಕೆ ಮೊದಲು ತಿನ್ನಬೇಕು. ಶೇಕಡಾ 90 ರಷ್ಟು ಜನರು ಸಲಾಡ್ ಆಹಾರದೊಂದಿಗೆ ಸೇವಿಸುತ್ತಾರೆ. ಈ ಕಾರಣದಿಂದಾಗಿ ಅವರ ದೇಹವು ಸಲಾಡ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ.
ಊಟಕ್ಕಿಂತ ಅರ್ಧ ಗಂಟೆ ಮೊದಲೇ ಸಲಾಡ್ ಸೇವನೆ ಮಾಡಬೇಕು. ಹೀಗೆ ಮಾಡುವುದ್ರಿಂದ ಸಲಾಡ್ ಪೌಷ್ಠಿಕಾಂಶ ಸಂಪೂರ್ಣ ದೇಹ ಸೇರುತ್ತದೆ. ಜೊತೆಗೆ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.
ಸಲಾಡ್ ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡುತ್ತದೆ. ಹೆಚ್ಚುವರಿ ಕೊಬ್ಬು ದೇಹ ಸೇರುವುದನ್ನು ತಡೆಯುತ್ತದೆ. ತೂಕವನ್ನು ನಿಯಂತ್ರಿಸುತ್ತದೆ.