
ತುಂಬಾ ಹಸಿವಾದಾಗ ಹೊಟ್ಟೆ ತುಂಬಾ ತಿನ್ನುತ್ತೇವೆ. ಆದರೆ ಕೆಲವರಿಗೆ ಇದರಿಂದ ಹೊಟ್ಟೆ ಭಾರ ಎನಿಸುತ್ತದೆ. ಇದರಿಂದ ಕುಳಿತುಕೊಳ್ಳಲು, ನಿಂತುಕೊಳ್ಳಲು ಕಷ್ಟವಾಗುತ್ತದೆ. ಅಂತವರು ಊಟವಾದ ತಕ್ಷಣ ಇದನ್ನು ಸೇವಿಸಿ.
*ಊಟವಾದ ಮೇಲೆ ಹೊಟ್ಟೆ ಭಾರ ಎನಿಸಿದರೆ 2 ಚಮಚ ಜೇನುತುಪ್ಪ ಸೇವಿಸಿ. ದಿನಕ್ಕೆ 2 ಬಾರಿ ಸೇವಿಸಿ. ಇದರಿಂದ ತಿಂದ ಆಹಾರ ಬೇಗ ಜೀರ್ಣವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ. ಆದರೆ ಮಧುಮೇಹದವರು ಜೇನುತುಪ್ಪದ ಬದಲು ಏಲಕ್ಕಿ ಸೇವಿಸಿ.
*ಅಗಸೆ ಬೀಜವನ್ನು ನೆನೆಸಿ ರಾತ್ರಿ ಮಲಗುವ ವೇಳೆ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಊಟ ಮಾಡಿದ ಬಳಿಕ ಉಂಟಾಗುವ ಹೊಟ್ಟೆ ಭಾರದ ಸಮಸ್ಯೆಯನ್ನು ನಿವಾರಿಸುತ್ತದೆ.