
ಸಾಮಾನ್ಯವಾಗಿ ವಾತಾವರಣದ ಧೂಳು, ಮಾಲಿನ್ಯದಿಂದ ಒಣ ಕೆಮ್ಮುವಿನ ಸಮಸ್ಯೆ ಕಾಡುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಒಣಕೆಮ್ಮುವಿನ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.
*ಒಂದು ಕಪ್ ಬಿಸಿ ನೀರಿಗೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಗಾರ್ಗ್ಲ್ ಮಾಡಿ. ಇದರಿಂದ ಗಂಟಲಿನಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾಗಳು ನಾಶವಾಗಿ ಒಣಕೆಮ್ಮು ನಿವಾರಣೆಯಾಗುತ್ತದೆ.
*ಜೇನುತುಪ್ಪ ಒಣಗಿದ ಗಂಟಲನ್ನು ತೇವಗೊಳಿಸುತ್ತದೆ. ಇದರಿಂದ ಒಣಕೆಮ್ಮು ಸಮಸ್ಯೆ ಕಾಡಿದರೆ 1 ಚಮಚ ಜೇನುತುಪ್ಪ ಸೇವಿಸಿ.
*ರಾತ್ರಿಯ ವೇಳೆ ಕೆಮ್ಮು ಹೆಚ್ಚಾಗಿ ಕಾಡಿದರೆ ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದು ಗಂಟಲ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.