ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಗರ್ಭಾಶಯದಲ್ಲಿ ಗಡ್ಡೆಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಗಡ್ಡೆಗಳಿಗೆ ಫೈಬ್ರಾಯ್ಡ್ ಗಳೆಂದು ಕರೆಯುತ್ತಾರೆ. ಇದು ಕ್ಯಾನ್ಸರ್ ಗಡ್ಡೆಗಳಿಗಿಂತ ವಿಭಿನ್ನವಾಗಿರುತ್ತದೆ. ಆದರೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ಬೆಳೆದು ಮುಂದೆ ಸಮಸ್ಯೆಯಾಗಬಹುದು. ಹಾಗಾಗಿ ಈ ಗಡ್ಡೆಗಳನ್ನು ನಿವಾರಿಸಲು ಮಹಿಳೆಯರು ಪ್ರತಿದಿನ ಈ ಹಣ್ಣುಗಳನ್ನು ಸೇವಿಸಿ.
ಸೇಬು : ಇದರಲ್ಲಿ ಪೆಕ್ಟಿನ್ ಅಂಶ ಸಮೃದ್ಧವಾಗಿದೆ. ಹಾಗಾಗಿ ಇದು ಈಸ್ಟ್ರೋಜನ್ ಮಟ್ಟವನ್ನು ಸಮತೋಲದಲ್ಲಿಡುತ್ತದೆ, ಹಾಗಾಗಿ ಇದನ್ನು ಸೇವಿಸಿದರೆ ಗಡ್ಡೆಗಳ ಸಮಸ್ಯೆ ಕಾಡುವುದಿಲ್ಲ.
ಬೆರಿ ಹಣ್ಣುಗಳು: ಇವು ನೈಸರ್ಗಿಕ ರೆಸ್ವೆರಾಟ್ರೊಲ್ ಅನ್ನು ಹೊಂದಿರುತ್ತದೆ. ಇದು ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ಗರ್ಭಾಶಯದ ಫೈಬ್ರಾಯ್ಡ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಕಿತ್ತಳೆ : ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮ್ಮ ಫಲವತ್ತತೆ ಚೆನ್ನಾಗಿ ಇದ್ದರೆ ಅಲ್ಲಿ ಗಡ್ಡೆಗಳ ಬೆಳೆಯಲು ಸಾಧ್ಯವಾಗುವುದಿಲ್ಲ.
ಪೇರಳೆ : ಇದರಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿ ಆಕ್ಸಿಡೆಂಟ್ , ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಗಡ್ಡೆಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ಈಗಾಗಲೇ ಫೈಬ್ರಾಯ್ಡ್ ಸಮಸ್ಯೆ ಇರುವಂತಹ ಮಹಿಳೆಯರು ಪ್ರತಿದಿನ ಈ ಹಣ್ಣುಗಳನ್ನು ಸೇವಿಸುವುದರ ಮೂಲಕ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಿ.