ನಾವು ದಿನವಿಡಿ ಸೇವಿಸುವ ಆಹಾರ ರಾತ್ರಿ ನಮ್ಮ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ಶೇಕಡಾ 66ರಷ್ಟು ಮಂದಿ ವಾರದಲ್ಲಿ ಮೂರು ದಿನ ಆಯಾಸಕ್ಕೊಳಗಾಗ್ತಿದ್ದಾರೆ. ನಿದ್ರೆಯ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಿದಾಗ ಸಸ್ಯಹಾರಿಗಳು ಕಡಿಮೆ ನಿದ್ರೆ ಮಾಡ್ತಾರೆ ಎಂಬುದು ಗೊತ್ತಾಗಿದೆ. ಸಸ್ಯಹಾರಿಗಳು ವಾರದಲ್ಲಿ ನಾಲ್ಕು ದಿನ ಆಯಾಸದಿಂದ ಬಳಲುತ್ತಿದ್ದರು.
ನಿದ್ರೆ ಗುಣಮಟ್ಟ ಹೆಚ್ಚಿಸಲು ಆಹಾರ ನೆರವಾಗಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಳ್ಳೆ ನಿದ್ರೆಗೆ ಯಾವ ಆಹಾರ ಬೆಸ್ಟ್ ಎಂಬುದನ್ನು ತಜ್ಞರು ಹೇಳಿದ್ದಾರೆ. Mozzarella ಚೀಸ್ ಒಳ್ಳೆ ನಿದ್ರೆಗೆ ಸಹಕಾರಿಯಂತೆ. ಹಾಗೆ ಓಟ್ಸ್ ಕೂಡ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡಬಲ್ಲದು ಎಂದು ತಜ್ಞರು ಹೇಳಿದ್ದಾರೆ.
ಅವಕಾಡೊ ಒಳ್ಳೆ ನಿದ್ರೆಗೆ ನೆರವಾಗುತ್ತದೆ. ಚೀಸ್ ಟೋಸ್ಟ್ ರಾತ್ರಿ ಸೇವನೆ ಮಾಡುವುದ್ರಿಂದ ಒಳ್ಳೆ ನಿದ್ರೆ ಬರುತ್ತದೆ. ಸೋಯಾ ಉತ್ಪನ್ನಗಳು, ಮೊಟ್ಟೆ, ಚೆರ್ರಿ ಗಾಢ ನಿದ್ರೆಗೆ ಸಹಕಾರಿಯಂತೆ. ಆದ್ರೆ ಮಲಗುವ ಮೊದಲು ಮದ್ಯಪಾನ ಮಾಡಬಾರದು ಎಂದು ತಜ್ಞರು ಹೇಳಿದ್ದಾರೆ.