ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ ವಿಟಮಿನ್ ಹಾಗೂ ಐರನ್ ಅವಶ್ಯಕತೆಯೂ ಇದೆ.
ತಜ್ಞರ ಪ್ರಕಾರ ಪ್ರೋಟೀನ್ ಹಾಗೂ ಪೋಷಕಾಂಶ ಮಿಶ್ರಿತ ಆಹಾರ ಸೇವನೆ ಬಹಳ ಮುಖ್ಯ. ಪ್ರತಿಯೊಬ್ಬ ವಯಸ್ಕ ವ್ಯಕ್ತಿ ಒಂದು ಕೆಜಿ ತೂಕಕ್ಕೆ ಒಂದು ಗ್ರಾಂನಂತೆ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು.
ತೂಕ 60 ಕೆ.ಜಿ ಇದ್ದಲ್ಲಿ 60 ಗ್ರಾಂ ಪ್ರೋಟೀನ್ ಇರುವ ಆಹಾರ ತೆಗೆದುಕೊಳ್ಳಬೇಕು. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಶೇಕಡಾ 90 ರಷ್ಟು ಮಂದಿ ಅವಶ್ಯಕತೆಗಿಂತ ಕಡಿಮೆ ಪ್ರೋಟೀನ್ ಸೇವನೆ ಮಾಡ್ತಾರೆ. ಪ್ರತಿದಿನ ವ್ಯಕ್ತಿ ಮೊಳಕೆಯುಕ್ತ ಕಾಳು, ಹಸಿರು ತರಕಾರಿ, ಸೋಯಾ, ಹಾಲು, ಮೊಸರು, ಪನ್ನೀರ್, ಬೆಣ್ಣೆಯನ್ನು ಸೇವನೆ ಮಾಡಬೇಕು. ಇದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ.