ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ನಾವು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತೇವೆ. ಹಾಗಾಗಿ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಲು ನಾವು ಚಳಿಗಾಲದಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.
*ಎಳ್ಳು ಉಷ್ಣ ವಸ್ತುವಾದ್ದರಿಂದ ಇದನ್ನು ಚಳಿಗಾಲದಲ್ಲಿ ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು. ಅಲ್ಲದೇ ಇದು ಮೂಳೆಗಳು ಮತ್ತು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
*ಚಳಿಗಾಲದಲ್ಲಿ ಒಣ ಹಣ್ಣುಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಇವುಗಳಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳಿದ್ದು, ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
* ಚಳಿಗಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇವು ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತವೆ.
*ಚಳಿಗಾಲದಲ್ಲಿ ದೇಸಿ ತುಪ್ಪ ಮತ್ತು ಜೇನುತುಪ್ಪವನ್ನು ಸೇವಿಸಿ. ಇವೆರಡು ದೇಹವನ್ನು ಬೆಚ್ಚಗಿರಿಸುತ್ತವೆ. ಇದರಿಂದ ಶೀತ, ಕಫದ ಸಮಸ್ಯೆ ದೂರವಾಗುತ್ತದೆ.