ಹೆಚ್ಚಿನವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕರುಳಿನ ಚಲನೆಯ ಸಮಸ್ಯೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಗುದ ಭಾಗದಲ್ಲಿ ಬಿರುಕು, ಫೈಲ್ಸ್ ನಂತಹ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಪಾನೀಯಗಳನ್ನು ಸೇವಿಸಿ.
*ನೀರು : ಮಲಬದ್ಧತೆ ಹೆಚ್ಚಾಗಿ ಸಾಕಷ್ಟು ನೀರು ಕುಡಿಯದೆ ಇರುವುದರಿಂದ ಉಂಟಾಗುತ್ತದೆ. ಹಾಗಾಗಿ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸಿ.
*ಅನಾನಸ್ ಜ್ಯೂಸ್ : ಇದು ಜೀರ್ಣಕ್ರಿಯೆಗೆ ತುಂಬಾ ಉತ್ತಮ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಇದು ಮಲ ಸರಿಯಾಗಿ ಹಾದುಹೋಗುವಂತೆ ಮಾಡುತ್ತದೆ.
*ಆಪಲ್ ಜ್ಯೂಸ್ : ಇದು ಮಲಬದ್ಧತೆಯನ್ನು ದೂರವಾಗಿಸಬಹುದು. ಈ ಹಣ್ಣಿನಲ್ಲಿ ಫೈಬರ್, ಖನಿಜಗಳು ಮತ್ತು ಜೀವಸತ್ವಗಳು ಅಧಿಕವಾಗಿದೆ.
* ದ್ರಾಕ್ಷಿ ರಸ : ದ್ರಾಕ್ಷಿ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.
*ಕಿತ್ತಳೆ ರಸ : ಇದರಲ್ಲಿ ವಿಟಮಿನ್ ಸಿ, ಖನಿಜಗಳು, ನಾರಿನಾಂಶ ಅಧಿಕವಾಗಿರುತ್ತದೆ. ಇವು ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.