ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಮರೆವಿನ ಸಮಸ್ಯೆ ಕಾಡುತ್ತಿದೆ. ಜ್ಞಾಪಕಶಕ್ತಿ ದುರ್ಬಲವಾಗುತ್ತಿದೆ. ಇದನ್ನು ನಿವಾರಿಸಿಕೊಳ್ಳಲು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಬೇಕು. ಮನಸ್ಸನ್ನು ಚುರುಕಾಗಿಸುವ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಆಹಾರವು ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೇ ರೀತಿ ಮೆದುಳಿನ ಕಾರ್ಯಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲ ಕೆಲವು ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ.
ಧಾನ್ಯಗಳು – ಹೆಚ್ಚಿನ ಪ್ರೋಟೀನ್ ಹೊಂದಿರುವ ಧಾನ್ಯಗಳನ್ನು ಪ್ರತಿದಿನ ಸೇವಿಸಬೇಕು. ಕಡಲೆ ಬೇಳೆ, ತೊಗರಿ ಬೇಳೆ ಮತ್ತು ರಾಗಿ ಅತ್ಯುತ್ತಮ ಧಾನ್ಯಗಳು. ಪ್ರೋಟೀನ್ ಜೊತೆಗೆ ಅವು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ.
ಮೀನು – ಮಾಂಸಾಹಾರಿಗಳು ವಾರಕ್ಕೊಮ್ಮೆ ಮೀನುಗಳನ್ನು ಸೇವಿಸಬೇಕು. ಮೀನು ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ. ಮೀನಿನಲ್ಲಿ ವಿಟಮಿನ್ ಡಿ ಮತ್ತು ಮಿನರಲ್‌ಗಳು ಇರುತ್ತವೆ. ಮೆದುಳನ್ನು ಚುರುಕುಗೊಳಿಸಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಅವು ಸಹಾಯ ಮಾಡುತ್ತವೆ.
ಬೀನ್ಸ್ – ಬೀನ್ಸ್, ಕಾಳುಗಳು ಮತ್ತು ಸೋಯಾಬೀನ್ ಅನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಬೀನ್ಸ್ ಉತ್ತಮ ಪ್ರಮಾಣದ ಪ್ರೋಟೀನ್, ಫೈಬರ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಬೀನ್ಸ್ ಅನ್ನು ವಾರಕ್ಕೆ 4 ಬಾರಿ ಸೇವಿಸಿ.
ಸೊಪ್ಪು ಮತ್ತು ತರಕಾರಿ – ವಾರಕ್ಕೊಮ್ಮೆಯಾದರೂ ಸೊಪ್ಪಿನ ಖಾದ್ಯಗಳನ್ನು ತಿನ್ನಬೇಕು. ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಪಾಲಕ್, ಕೋಸುಗಡ್ಡೆ, ಮೆಂತ್ಯ ಮುಂತಾದ ಸೊಪ್ಪುಗಳು ಆರೋಗ್ಯಕರವಾಗಿವೆ.
ಸೀಡ್ಸ್ – ಸೀಡ್ಸ್ ಕೂಡ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ಎಂಟಿಒಕ್ಸಿಡೆಂಟ್‌ಗಳಿವೆ. ಆದ್ದರಿಂದ ಸೀಡ್‌ಗಳನ್ನು ಪ್ರತಿದಿನ ಸೇವಿಸಬೇಕು.