ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ಸಮಸ್ಯೆ, ಧೂಳು, ಮಾಲಿನ್ಯಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇವು ಹೆಚ್ಚಾದಂತೆ ಮುಖದ ಅಂದ ಕೆಡುತ್ತದೆ. ಅದಕ್ಕಾಗಿ ಅನೇಕ ಮನೆಮದ್ದುಗಳನ್ನು, ದುಬಾರಿ ಕ್ರೀಂಗಳನ್ನು ಬಳಸುತ್ತಾರೆ. ಅದರ ಬದಲು ಮೊಡವೆ ಜೊತೆ ಅದರ ಕಲೆ ಕೂಡ ನಿವರಣೆಯಾಗಲು ಇವುಗಳನ್ನು ಪ್ರತಿದಿನ ತಪ್ಪದೇ ಸೇವಿಸಿ.
*ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ಮೊಡವೆಗಳ ಸಮಸ್ಯೆ ದೂರವಾಗುತ್ತದೆ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ. ಮತ್ತು ಇದು ದೇಹವನ್ನು ಹೈಡ್ರೀಕರಿಸುವುದರಿಂದ ಮೊಡವೆ ಮೂಡುವುದು ನಿವಾರಣೆಯಾಗತ್ತದೆ.
*ಪ್ರತಿದಿನ ತುಳಸಿ ಮತ್ತು ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ. ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ.
*ನಿಮಗೆ ಮೊಡವೆ ಸಮಸ್ಯೆಯಿದ್ದರೆ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಡಿ. ಡೈರಿ ಉತ್ಪನ್ನಗಳು ಕರುಳನ್ನು ಕೆರಳಿಸುತ್ತದೆ. ಇದರಿಂದ ಮೊಡವೆಗಳು ಮೂಡುತ್ತವೆ.