
ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಲೇ ಬೇಕಾದ ಕೆಲವು ಆಹಾರಗಳಿವೆ. ಅವುಗಳಲ್ಲಿ ಮೂಲಂಗಿಯೂ ಒಂದು. ಇದರಿಂದ ಏನು ಪ್ರಯೋಜನವಿದೆ ಎಂದಿರಾ?
ಮೂಲಂಗಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಹಾಗಾಗಿ ಮಧುಮೇಹಿಗಳು ಇದನ್ನು ವಾರದಲ್ಲಿ ಮೂರು ಬಾರಿ ಸೇವಿಸುವುದು ಒಳ್ಳೆಯದು. ಇದು ಇನ್ಸುಲಿನ್ ಪ್ರತಿರೋಧದಿಂದ ನಿಮ್ಮನ್ನು ರಕ್ಷಿಸಲು ನೆರವಾಗುತ್ತದೆ.
ಮೂತ್ರಪಿಂಡಗಳಲ್ಲಿ ಸೇರಿಕೊಂಡಿರುವ ವಿಷವನ್ನು ಹೊರಹಾಕುತ್ತದೆ. ಪಿತ್ತಜನಕಾಂಗ ಸರಾಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುತ್ತದೆ.
ಇದರಲ್ಲಿ ಕ್ಯಾಲ್ಸಿಯಂ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ರಕ್ತದೊತ್ತಡ ಮತ್ತು ಹೃದಯದ ಸಂಬಂಧಿ ರೋಗಗಳಿಂದ ನಿಮ್ಮನ್ನು ಕಾಪಾಡುತ್ತದೆ. ಕ್ಯಾನ್ಸರ್ ವಿರೋಧಿ ಗುಣವನ್ನೂ ಹೊಂದಿರುವ ಇದರ ಸೇವನೆಯಿಂದ ಗೆಡ್ಡೆಗಳೂ ಬೆಳೆಯುವುದಿಲ್ಲ.
ಚಳಿಗಾಲದಲ್ಲಿ ಕಾಡುವ ಶಿಲೀಂಧ್ರ ಸಂಬಂಧಿ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ಪ್ರೊಟೀನ್ ಗಳು ನಿಮ್ಮ ತ್ವಚೆಯ ಆರೈಕೆಯನ್ನೂ ಮಾಡುತ್ತವೆ. ಮೂಲವ್ಯಾಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಚಳಿಗಾಲದಲ್ಲಿ ಮೂಲಂಗಿ ಸೇವನೆ ಮಾಡಬೇಕು.