ದಿನ ನಿತ್ಯದ ಅಹಾರ ಪದ್ದತಿಯಲ್ಲಿ ಬೆಲ್ಲವನ್ನು ಸೇರಿಸಿಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಬಹುದು. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತದ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಇದು ನೆರವಾಗುತ್ತದೆ.
ಬೆಲ್ಲವನ್ನು ನಿತ್ಯ ಟೀ ಮತ್ತು ಕಾಫಿಯಲ್ಲಿ ಬೆರೆಸಿ ಸೇವಿಸಬಹುದು ಅಥವಾ ಪ್ರತಿನಿತ್ಯ ಐದು ಗ್ರಾಂ ಬೆಲ್ಲವನ್ನು ತಿನ್ನುವುದರಿಂದ ರಕ್ತ ಹೀನತೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು.
ಸಾಮಾನ್ಯ ಶೀತ ನೆಗಡಿ ಬಂದಾಗ ಬೆಲ್ಲದ ತುಂಡೊಂದನ್ನು ತಿಂದು ಉಗುರು ಬೆಚ್ಜಗಿನ ನೀರನ್ನು ಕುಡಿದರೆ ಸಾಕು, ಇದೇ ಪ್ರಥಮ ಚಿಕಿತ್ಸೆಯಾಗುತ್ತದೆ. ಬೆಲ್ಲದ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಮೊಡವೆ, ಮುಖದಲ್ಲಿ ನೆರಿಗೆ ಮೂಡುವುದನ್ನು ತಡೆಯಲು ಹಾಗೇ ಮುಖದ ಕಾಂತಿಯನ್ನು ಹೆಚ್ಚಿಸಲು ಬೆಲ್ಲವನ್ನು ಸೇವಿಸಿದರೆ ಸಾಕು.
ಕೂದಲ ಪ್ರತಿಯೊಂದು ಸಮಸ್ಯೆಗೂ ಬೆಲ್ಲದಲ್ಲಿ ಉತ್ತರವಿದೆ. ಪ್ರತಿದಿನ ಐದು ಗ್ರಾಮ್ ನಷ್ಟು ಬೆಲ್ಲವನ್ನು ಒಂದು ಲೋಟ ಬಿಸಿ ನೀರಿನ ಜೊತೆ ಸೇವಿಸಿದರೆ ಕೂದಲಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.