ಶುಂಠಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಔಷಧಿಯಂತೆ ಬಳಸುತ್ತಾರೆ. ಇದನ್ನು ಚಳಿಗಾಲದಲ್ಲಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
1. ಚಳಿಗಾಲದಲ್ಲಿ ಆಯಾಸವಾದಾಗ ವಾಕರಿಕೆ, ವಾಂತಿ, ತಲೆಯಲ್ಲಿ ಭಾರ, ದಣಿವು ಮತ್ತು ಆಲಸ್ಯ ಭಾವನೆ ಉಂಟಾಗುತ್ತದೆ. ಆ ವೇಳೆ ಶುಂಠಿ ಚಹಾ ಸೇವಿಸಿದರೆ ನಿಮ್ಮ ದೇಹದ ಚೈತನ್ಯ ಹೆಚ್ಚುತ್ತದೆ.
2. ಚಳಿಗಾಲದಲ್ಲಿ ಶುಷ್ಕ ವಾತಾವರಣದಿಂದ ಕಫ, ಶೀತದ ಸಮಸ್ಯೆ ಕಾಡುತ್ತದೆ. ಹಾಗಾಗಿ ಪ್ರತಿದಿನ ಶುಂಠಿ ಸೇವಿಸಿದರೆ ಈ ಸಮಸ್ಯೆಗಳು ದೂರವಾಗುತ್ತದೆ.
3. ಚಳಿಗಾಲದಲ್ಲಿ ಹೆಚ್ಚಾಗಿ ಹಸಿವು ಆಗುವುದಿಲ್ಲ. ಹಾಗಾಗಿ ಶುಂಠಿ ಸೇವಿಸಿದರೆ ಪಿತ್ತಕೋಶದಿಂದ ಪಿತ್ತರಸ ಉತ್ಪಾದನೆ ಹೆಚ್ಚಾಗಿ ಆಹಾರ ಬಹಳ ಬೇಗ ಜೀರ್ಣವಾಗುತ್ತದೆ.
4. ಚಳಿಗಾಲದಲ್ಲಿ ಮೈಕೈ ನೋವು ಸಮಸ್ಯೆ ಕಾಡಿದರೆ ಶುಂಠಿ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.
5. ಅಜೀರ್ಣದಿಂದ, ಗ್ಯಾಸ್ಟ್ರಿಕ್ ನಿಂದ ಹೊಟ್ಟೆ ನೋವು ಕಾಡುತ್ತಿದ್ದರೆ ಶುಂಠಿ ಸೇವಿಸಿದರೆ ಹೊಟ್ಟೆ ನೋವು ತಕ್ಷಣ ವಾಸಿಯಾಗುತ್ತದೆ.