alex Certify ಈ ಆರೋಗ್ಯ ಲಾಭ ಪಡೆಯಲು ಸೇವಿಸಿ ʼನುಗ್ಗೆಸೊಪ್ಪುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆರೋಗ್ಯ ಲಾಭ ಪಡೆಯಲು ಸೇವಿಸಿ ʼನುಗ್ಗೆಸೊಪ್ಪುʼ

ನುಗ್ಗೆಕಾಯಿ ಬಗ್ಗೆ ನಿಮಗೆಲ್ಲಾ ಗೊತ್ತು. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ಇದರ ಸೇವನೆಯಿಂದ ಬಹಳಷ್ಟು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ನುಗ್ಗೆ ಸೊಪ್ಪಿನಲ್ಲಿ ಅದಕ್ಕೂ ಮಿಗಿಲಾದ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?

ನುಗ್ಗೇಸೊಪ್ಪಿನಿಂದ ಪಲ್ಯ, ಸಾಂಬಾರು ಹಾಗೂ ರೊಟ್ಟಿ ತಯಾರಿಸಬಹುದು. ಇದರ ಸೇವನೆಯಿಂದ ಹಲವು ಔಷಧೀಯ ಗುಣಗಳನ್ನು ಪಡೆದುಕೊಳ್ಳಬಹುದು. ನರದೌರ್ಬಲ್ಯವನ್ನು ಕಡಿಮೆ ಮಾಡುವ ಈ ಸೊಪ್ಪನ್ನು ಬೇಯಿಸಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಪುರುಷರ ವೈಯಕ್ತಿಕ ಸಮಸ್ಯೆಗಳು ದೂರವಾಗುತ್ತವೆ.

ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ. ಜಂತುಹುಳು ಸಮಸ್ಯೆಗೂ ಇದು ಮದ್ದಾಗಬಲ್ಲದು.

ರಕ್ತ ಶುದ್ಧಿ ಮಾಡುವ ಗುಣ ಹೊಂದಿರುವ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಸಳೆ ಸೊಪ್ಪಿನ ಬಳಿಕ ಅತ್ಯಧಿಕ ಕ್ಯಾಲ್ಸಿಯಂ ಅನ್ನು ಹೊಂದಿರುವ ಈ ಸೊಪ್ಪನ್ನು ಕನಿಷ್ಠ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮರೆಯದೆ ತಿನ್ನಿ. ವೈದ್ಯರಿಂದ ಶಾಶ್ವತವಾಗಿ ದೂರವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...