ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿದ ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸುವ ತಂತ್ರಾಂಶ ಪುನಾರಂಭಿಸಲಾಗಿದೆ. ಅರ್ಹ ಕಾರ್ಮಿಕರು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ತಾಂತ್ರಿಕ ದೋಷ ಕಂಡು ಬಂದ ಕಾರಣ ಫೆಬ್ರವರಿ 6ರಿಂದ ತಂತ್ರಾಂಶ ಸ್ಥಗಿತಗೊಳಿಸಿ ನಿರ್ವಹಣೆ ಕೈಗೊಳ್ಳಲಾಗಿತ್ತು. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ನೂತನ ತಂತ್ರಾಂಶ ಪುನರಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ಜೂನ್ 11ರಿಂದ https://kbocwwb.karnataka.gov.in ಜಾಲತಾಣದ ಮೂಲಕ ತಂತ್ರಾಂಶ ಪುನಾರಂಭೀಸಲಾಗಿದ್ದು, ಅರ್ಹ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.