ಬೆಂಗಳೂರು : ರಾಜ್ಯದ ವಿವಿಧ ಕಡೆ 17 ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.
15ನೇ ಹಣಕಾಸು ಆಯೋಗದ ಮಾನದಂಡದ ಅನ್ವಯ ರಾಜ್ಯದ ಅಗ್ನಿಶಾಮಕ ದಳಕ್ಕೆ 2022-23ರ ಸಾಲಿನಲ್ಲಿ 329 ಕೋಟಿ ಮಂಜೂರಾಗಿದೆ. ಈ ಹಣದಲ್ಲಿ ಹೊಸ ಅಗ್ನಿಶಾಮಕ ಠಾಣೆಗಳ ನಿರ್ಮಾಣ ಸೇರಿದಂತೆ ಉನ್ನತೀಕರಣದ ಕ್ರಿಯಾಯೋಜನೆಗಳು ಹೀಗಿದೆ ಎಂದು ಸರ್ಕಾರ ಮಾಹಿತಿ ಹಂಚಿಕೊಂಡಿದೆ.