ಬೆಂಗಳೂರು: ಬಸವಣ್ಣನವರ ಪಠ್ಯ ವಿವಾದದ ಬಳಿಕ ಅಂಬೇಡ್ಕರ್ ಪಠ್ಯ ವಿವಾದ ಉಂಟಾಗಿದೆ. ಅಂಬೇಡ್ಕರ್ ಅವರಿಗೆ ಇದ್ದ ಬಿರುದನ್ನು ರೋಹಿತ್ ಚಕ್ರತಿರ್ಥ ಸಮಿತಿ ಕೈಬಿಟ್ಟಿದೆ ಎನ್ನಲಾಗಿದೆ.
‘ಸಂವಿಧಾನ ಶಿಲ್ಪಿ’ ಬಿರುದನ್ನು ಪಠ್ಯದಿಂದ ಪರಿಷ್ಕರಣಾ ಸಮಿತಿ ತೆಗೆದುಹಾಕಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಅಂಬೇಡ್ಕರ್ ಅವರಿಗೆ ಇದ್ದ ‘ಸಂವಿಧಾನ ಶಿಲ್ಪಿ’ ಬಿರುದನ್ನು ಕೈಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
9ನೇ ತರಗತಿಯ ‘ನಮ್ಮ ಸಂವಿಧಾನ’ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ‘ಸಂವಿಧಾನ ಶಿಲ್ಪಿ’ ಪಠ್ಯದಲ್ಲಿ ಸಂವಿಧಾನ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ಇದೆ. ಭಾರತದ ಸಂವಿಧಾನ ರಚನೆಗೆ ನೀಡಿದ ಕೊಡುಗೆ ಆಧರಿಸಿ ಅಂಬೇಡ್ಕರ್ ಅವರಿಗೆ ‘ಸಂವಿಧಾನ ಶಿಲ್ಪಿ’ ಬಿರುದು ನೀಡಲಾಗಿತ್ತು.
ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಪರಿಷ್ಕರಣೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಆದರೆ, ‘ಸಂವಿಧಾನ ಶಿಲ್ಪಿ’ ಬಿರುದನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕೈಬಿಟ್ಟಿದೆ. ‘ಸಂವಿಧಾನ ಶಿಲ್ಪಿ’ ಬಿರುದನ್ನು ತೆಗೆದಿರುವುದಕ್ಕೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಂಬೇಡ್ಕರ್ ಅವರಿಗೆ ಪಠ್ಯದಲ್ಲಿ ಅವಹೇಳನ ಮಾಡಲಾಗಿದೆ ಎಂದು ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಆಕ್ರೋಶ ತೀವ್ರಗೊಂಡಿದೆ ಎಂದು ಹೇಳಲಾಗಿದೆ.