ಬೆಂಗಳೂರು : ರಾಜ್ಯದ ಸರ್ಕಾರಿ / ಅನುದಾನಿತ/ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದಿನಾಂಕ:26-11-2024 ರಂದು ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತು ಈಗಾಗಲೇ ಉಲ್ಲೇಖಿತ(1) ರ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮುಂದುವರೆದಂತೆ, ಉಲ್ಲೇಖ(2)ರ ಪತ್ರದಲ್ಲಿ ಜಂಟಿ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ ರವರು 2015ನೇ ಸಾಲಿನಿಂದ 26 ನವೆಂಬರ್ ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದು, ಪ್ರಸಕ್ತ ವರ್ಷ ಭಾರತದ 75ನೇ ಸಂವಿಧಾನ ಅಂಗೀಕಾರವಾದ ದಿನವನ್ನು ಶಾಲೆಗಳಲ್ಲಿ ಒಂದು ವರ್ಷದ ಅವಧಿಗೆ ಈ ಕೆಳಕಂಡ ಚಟುವಟಿಕೆಗಳೊಂದಿಗೆ ಆಚರಿಸಲು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
1. Moming assembly on 26-11-2024 in every school to make students aware of the importance of the Constitution.
II. Talks/Discussions/Seminars by inviting eminent personalities
III. Painting/Poster making/ Craft Competitions
IV. Declamations on the significance of the Constitution,
V. Community awareness activities like street plays, prabhat pheries etc.
VI. Creative ways of engaging with students like selfie points, formation of human chains, rap songs etc.
ಮುಂದುವರೆದಂತೆ, ಶಿಕ್ಷಣ ಮಂತ್ರಾಲಯವು Constitution Day ಕುರಿತ Module ಅನ್ನು DIKSHA portal ನಲ್ಲಿ ಅಪ್ ಲೋಡ್ ಮಾಡುತ್ತಿರುವುದಾಗಿ ತಿಳಿಸುತ್ತಾ ಸಂವಿಧಾನ ದಿನಾಚರಣೆಯ ಕುರಿತು PMrevidya platform ನಲ್ಲಿ upload ಮಾಡುತ್ತಿರುವ ವಿಡಿಯೋವನ್ನು ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲು ಮತ್ತು MyGov portal ನಲ್ಲಿ upload ಮಾಡಲಾಗುವ quiz ನಲ್ಲಿಯೂ ಭಾಗವಹಿಸಲು ಸೂಚನೆ ನೀಡಲು ತಿಳಿಸಿದ್ದಾರೆ.
ಈಗಾಗಲೇ ಪ್ರತಿ ನಿತ್ಯ ಶಾಲೆಗಳಲ್ಲಿ ಪ್ರಾರ್ಥನೆಯ ಸಂದರ್ಭ ಸಂವಿಧಾನ ಪೀಠಿಕೆಯನ್ನು ಎಲ್ಲಾ ಸರ್ಕಾರಿ / ಅನುದಾನಿತ/ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ ಕ್ರಮವಹಿಸುವುದು. ಶಿಕ್ಷಣ ಮಂತ್ರಾಲಯ, ನವದೆಹಲಿ ಸಿದ್ಧಪಡಿಸಿರುವ Constitution Day ಕುರಿತ Module ಅನ್ನು ಡಿ.ಎಸ್.ಇ.ಆರ್.ಟಿ ಯ ಸಹಯೋಗದಲ್ಲಿ ಭಾಷಾಂತರ ಮಾಡಿಸಿ ಡಿ.ಎಸ್.ಇ.ಆರ್.ಟಿ ಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಬಳಸಬಹುದಾಗಿದೆ. ಇಂಗ್ಲಿಷ್ ಆವೃತ್ತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.ಮೇಲ್ಕಂಡ ಸೂಚನೆಗಳ ಅನುಸಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ:26-11-2024ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲು ತಿಳಿಸಿದೆ.