ಬೆಂಗಳೂರು : ಸಂವಿಧಾನ ಜಾಗೃತಿ ಜಾಥಾ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ 10 ಸಾವಿರ ಅನುದಾನ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲು ಪ್ರತಿ ಗ್ರಾಮಪಂಚಾಯತಿಗೆ ತಲಾ ರೂ 10,000/-(ರೂಪಾಯಿ ಹತ್ತು ಸಾವಿರಗಳು) ರಂತೆ ಒಟ್ಟು 5951 ಗ್ರಾಮಪಂಚಾಯತಿಗಳಿಗೆ ರೂ5,95,10,000(ರೂಪಾಯಿ ಐದು ಕೋಟಿ ತೊಂಭತ್ತೈದು ಲಕ್ಷ ಹತ್ತು ಸಾವಿರ ಮಾತ್ರ) ಅನುದಾನವನ್ನು ವಿವಿಧ ಅಭಿವೃದ್ಧಿ ಯೋಜನೆಯಡಿಯಲ್ಲಿ(Revenue -HOA-VDP) ಆಯುಕ್ತರು, ಸಮಾಜಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಒದಗಿಸಿರುವ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ ಬಿಡುಗಡೆ ಮಾಡಲು ಆದೇಶಿಸಿದೆ.
ವಿವಿಧ ಅಭಿವೃದ್ಧಿಯೋಜನೆಗಳಡಿಯಲ್ಲಿ ಒದಗಿಸಿರುವ ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಿದ ನಂತರ ಅವಶ್ಯವಿದ್ದಲ್ಲಿ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
![](https://kannadadunia.com/wp-content/uploads/2024/02/jatha-1.jpg)
![](https://kannadadunia.com/wp-content/uploads/2024/02/jatha-2.jpg)