alex Certify ಬ್ಯಾಂಕ್ ಉದ್ಯೋಗಿಗಳನ್ನೂ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಬೂಸ್ಟರ್ ಡೋಸ್ ನೀಡಲು ಕೇಂದ್ರಕ್ಕೆ AIBOC ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಉದ್ಯೋಗಿಗಳನ್ನೂ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಬೂಸ್ಟರ್ ಡೋಸ್ ನೀಡಲು ಕೇಂದ್ರಕ್ಕೆ AIBOC ಪತ್ರ

ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ ಬೂಸ್ಟರ್ ಶಾಟ್‌ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನೌಕರರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸುವಂತೆ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.

ಹಣಕಾಸು ಸಚಿವರಿಗೆ ಪತ್ರ ಬರೆದಿರುವ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ವೈರಸ್ ಹರಡುವಿಕೆಯ ಸರಪಳಿಯನ್ನು ಮುರಿಯಲು ವಾರದಲ್ಲಿ ಐದು ದಿನಗಳಷ್ಟೆ ಕೆಲಸ ನಿರ್ವಹಿಸುವಂತ ನಿಯಮ ಅನುಷ್ಠಾನಕ್ಕೆ ಮನವಿ ಮಾಡಿದೆ. ಎಲ್ಲಾ ಶಾಖೆಗಳು ಅಥವಾ ಕಚೇರಿಗಳಲ್ಲಿ, ಕೇವಲ 50 ಪ್ರತಿಶತದಷ್ಟು ಸಿಬ್ಬಂದಿ ಮಾತ್ರ ಭೌತಿಕವಾಗಿ ಹಾಜರಿರಬೇಕು. ಇನ್ನುಳಿದವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು.

ಅಗತ್ಯ ಸೇವೆಯ ಅಡಿಯಲ್ಲಿ ಉಪನಗರ ರೈಲ್ವೆ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಬ್ಯಾಂಕರ್‌ಗಳಿಗೆ ವಿಶೇಷ ಸ್ಥಾನಮಾನವನ್ನ ನೀಡಬೇಕು. ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬೂಸ್ಟರ್ ಡೋಸ್ ನೀಡಲಾಗ್ತಿದೆ. ನಮ್ಮನ್ನು ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿ ನಮಗೂ ಬೂಸ್ಟರ್ ಡೋಸ್ ನೀಡಿ.‌ ವೈರಸ್ ನಿಯಂತ್ರಿಸಲು ಟೆಸ್ಟಿಂಗ್ ಸೌಲಭ್ಯ ನೀಡಿ, ಕಡ್ಡಾಯ ಆ್ಯಂಟಿಜೆನ್ ಟೆಸ್ಟ್ ಗಳ ಅಗತ್ಯವಿದೆ. ನಮಗೂ ನಿಯಮಿತ ಚಿಕಿತ್ಸೆ ನೀಡಿ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮೊದಲ ಎರಡು ಅಲೆಗಳಲ್ಲಿ ಸುಮಾರು 2,000 ಬ್ಯಾಂಕ್ ಉದ್ಯೋಗಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಹಣಕಾಸು ಸೇನೆಯಾಗಿ, ಎಂಥಾ ಸಂದರ್ಭದಲ್ಲೂ ನಮ್ಮ ದೇಶಕ್ಕಾಗಿ ದುಡಿಯುತ್ತಿದ್ದೇವೆ.‌ ದುರದೃಷ್ಟವಶಾತ್, ಬ್ಯಾಂಕ್ ಉದ್ಯೋಗಿಗಳನ್ನು ಫ್ರಂಟ್‌ಲೈನ್ ಕೋವಿಡ್ ವಾರಿಯರ್ ಎಂದು ಗುರುತಿಸುವುದು ವಿಳಂಬವಾಗುತ್ತಿದೆ. ಇನ್ನು ಮುಂದೆಯಾದರೂ ನಮ್ಮನ್ನ ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಿ ಮುನ್ನೆಚ್ಚರಿಕಾ ಲಸಿಕೆ ಡೋಸ್ ನೀಡಿ ಎಂದು ಎಐಬಿಒಸಿ ಪತ್ರ ಬರೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...