ಬೆಂಗಳೂರು: ಒಪ್ಪಿತ ಸಂಬಂಧ ಮಹಿಳೆ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಹಲವು ವರ್ಷಗಳ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಮಹಿಳೆ ಹೂಡಿದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಆದರೆ ಆರೋಪಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ, ವಂಚಿಸಿದ್ದಾನೆ ಎಂಬ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣ ರದ್ದು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಆರೋಪಿ ವ್ಯಕ್ತಿ ಮತ್ತು ದೂರುದಾರ ಮಹಿಳೆ ನಡುವೆ ಎಷ್ಟು ವರ್ಷದ ಒಪ್ಪಿತ ಸಂಬಂಧವಿರಬಹುದು ಆದರೆ, ಅದೇ ಆತನಿಗೆ ಆಕೆಯ ಮೇಲೆ ಹಲ್ಲೆ ನಡೆಸಲು ಲೈಸನ್ಸ್ ಆಗುವುದಿಲ್ಲ ಎಂದು ತಿಳಿಸಿದೆ.
ಅರ್ಜಿದಾರ ಆರೋಪಿ ಮತ್ತು ಮಹಿಳೆ ನಡುವೆ ಐದು ವರ್ಷಕ್ಕೂ ಮೀರಿದ ಒಪ್ಪಿತ ಸಂಬಂಧವಿದೆ. ಮದುವೆಯಾಗುವುದಾಗಿ ನಂಬಿಸಿ ತನ್ನ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ದೂರುದಾರರ ಮಹಿಳೆ ಹೇಳಿದ್ದಾರೆ. ಆದರೆ ಆರೋಪಿ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆಕೆ ಗಾಯಗೊಂಡಿರುವುದು ಪ್ರಮಾಣ ಪತ್ರದಲ್ಲಿ ದಾಖಲಾಗಿದೆ. ಮಹಿಳೆಯ ದೂರಿನಲ್ಲಿ ಆರೋಪಗಳನ್ನು ಒಪ್ಪಲಾಗದು. ಅರ್ಜಿದಾರ ಆರೋಪಿ ಹೇಳಿರುವಂತೆ ಮಹಿಳೆ ಮತ್ತೊಬ್ಬನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ದೂರುದಾರ ಮಹಿಳೆ ಎರಡು ದೋಣಿಯಲ್ಲಿ ಏಕಕಾಲದಲ್ಲಿ ತೇಲುತ್ತಿದ್ದಾರೆ ಎನಿಸುತ್ತಿದೆ. ಆದ್ದರಿಂದ ಐಪಿಸಿ ಸೆಕ್ಷನ್ 376 ಅಡಿ ಮದುವೆಯಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ವಾದವನ್ನು ಒಪ್ಪಲಾಗದು ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.