ಸಮ್ಮತ ಸಂಬಂಧ ಪ್ರಕರಣವೊಂದರಲ್ಲಿ ಮಹಿಳೆ ನೀಡಿದ ದೂರಿನ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ನ್ಯಾಯಾಲಯ ರಿಲೀಫ್ ನೀಡಿದೆ.
ಅನ್ಯ ಧರ್ಮದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕ ಪ್ರಯತ್ನ ಆರೋಪ ಹೊತ್ತಿದ್ದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಯ ಪರ ವಾದ ಮಂಡಿಸಿದ ವಕೀಲ ರಾಮಪ್ರಸಾದ್ ಗುಪ್ತಾ, ಮಹಿಳೆ ಮತ್ತು ನನ್ನ ಕಕ್ಷಿದಾರ ಇಬ್ಬರು ಸ್ನೇಹಿತರಾಗಿದ್ದು, 2018ರಲ್ಲಿ ಸಂಬಂಧ ಬೆಳೆಸಿದ್ದರು. ಇಬ್ಬರು ಬೇರೆ ಬೇರೆ ಧರ್ಮದವರಾಗಿದ್ದರಿಂದ ಪೋಷಕರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆ 11 ನೇ ಕಂತು ಪಡೆಯಲು ಇ-ಕೆವೈಸಿ ಗಡುವು ವಿಸ್ತರಣೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ, ಲಿಖಿತ ಭರವಸೆ ನೀಡಿದ ನಂತರವೂ ಆತನು ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಸಂಗತಿಯನ್ನು ಗಮನಿಸಿದರು.
ಆದಾಗ್ಯೂ ಆಕೆ ತನ್ನ ಹಳೆಯ ಗೆಳೆಯನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಪ್ರಯತ್ನಿಸಿದ್ದು, “ನನ್ನ ದೂರಿನಲ್ಲಿ ಮುಂದುವರಿಯದಿರಲು ನಾನು ನಿರ್ಧರಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಆತನ ಸ್ವಂತ ಊರಲ್ಲಿ ಕುಟುಂಬದವರು ವಿವಾಹ ಮಾಡಿದ್ದಾರೆ ಎಂದು ತಿಳಿದ ನಂತರ ಕೋಪದ ಭರದಲ್ಲಿ ಪ್ರಕರಣ ದಾಖಲಿಸಿದ್ದೆಂದು ಆಕೆ ಹೇಳಿಕೊಂಡಿದ್ದಾಳೆ.
ಅಷ್ಟೇ ಅಲ್ಲದೇ ತಾವಿಬ್ಬರು ಸ್ನೇಹಿತರಾಗಿದ್ದು ಮದುವೆಯಾಗಲು ಬಯಸಿದ್ದೆವು, ಆದರೆ ಪೋಷಕರಿಂದ ತೀವ್ರ ವಿರೋಧ ಎದುರಿಸಿದೆವು ಎಂಬ ಸಂಗತಿ ಅಫಿಡೆವಿಟ್‌ನಲ್ಲಿ ಸಹ ದಾಖಲಿಸಿದ್ದಳು.
ಅಂತಿಮವಾಗಿ ಈ ಅಫಿಡವಿಟ್‌ನಿಂದಾಗಿ, “ಸಂಬಂಧವು ಒಮ್ಮತದಂತಿದೆ” ಎಂದು ನ್ಯಾಯಾಲಯವು ಗಮನಿಸಿದ್ದಲ್ಲದೇ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಿದೆ.