![](https://kannadadunia.com/wp-content/uploads/2021/12/Conjoined-twins-Sohna-and-Mohna-bag-a-job-in-the-Punjab-State-Power-Corporation-Limited-PSPCL.png)
ಅಮೃತಸರ: ಸಯಾಮಿ ಅವಳಿಗಳಾದ ಸೊಹ್ನಾ ಮತ್ತು ಮೋಹ್ನಾ ಅವರಿಗೆ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್(PSPCL) ನಲ್ಲಿ ಉದ್ಯೋಗ ಸಿಕ್ಕಿದೆ.
ಇದಕ್ಕಾಗಿ ಸಂತಸ ವ್ಯಕ್ತಪಡಿಸಿದ ಅವರು, ನಮಗೆ ಕೆಲಸ ಸಿಕ್ಕಿರುವುದರಿಂದ ತುಂಬಾ ಸಂತೋಷವಾಗಿದೆ. ಡಿಸೆಂಬರ್ 20 ರಂದು ಕೆಲಸಕ್ಕೆ ಸೇರಿದ್ದೇವೆ. ನಮಗೆ ಅವಕಾಶ ನೀಡಿದ್ದಕ್ಕಾಗಿ ಪಂಜಾಬ್ ಸರ್ಕಾರ ಮತ್ತು ಶಿಕ್ಷಣ ನೀಡಿದ ಪಿಂಗಲ್ವಾರಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸೋಹ್ನಾ-ಮೊಹ್ನಾ ಅವರು ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳಲು ನಮಗೆ ಸಹಾಯ ಮಾಡುತ್ತಾರೆ. ಪಂಜಾಬ್ ಸರ್ಕಾರ ಅವರನ್ನು ನೇಮಕಾತಿ ಮಾಡಿಕೊಂಡಿದೆ. ಸೋಹ್ನಾಗೆ ಕೆಲಸ ಸಿಕ್ಕಿದೆ. ಜೊತೆಗೆ ಮೊಹ್ನಾ ಸಹಾಯ ಮಾಡುತ್ತಾರೆ. ಅವರಿಗೆ ಕೆಲಸದ ಅನುಭವವೂ ಇದೆ ಎಂದು ಪಿಎಸ್‌ಪಿಸಿಎಲ್ ಸಬ್‌ಸ್ಟೇಷನ್ ಜೂನಿಯರ್ ಎಂಜಿನಿಯರ್ ರವೀಂದರ್ ಕುಮಾರ್ ತಿಳಿಸಿದ್ದಾರೆ.