ದೇಹದ ಕೆಲವೊಂದು ಭಾಗಗಳು ಪರಸ್ಪರ ಅಂಟಿಕೊಂಡು ಹುಟ್ಟಿರುವ ಅವಳಿಗಳನ್ನು ಪ್ರತ್ಯೇಕಿಸಲು ಅಗತ್ಯವಾದ ಶಸ್ತ್ರಚಿಕಿತ್ಸೆಯೊಂದನ್ನು ಬಾಂಗ್ಲಾದೇಶಿ ಸರ್ಜನ್‌ಗಳು ಸೋಮವಾರ ನೆರವೇರಿಸಲಿದ್ದಾರೆ.
ಮ್ಯಾರಾಥಾನ್ ಸರ್ಜರಿಯೇ ಬೇಕಾಗಿರುವ ಈ ಅವಳಿಗಳಿಗೆ, ಕೋವಿಡ್ ಕಾರಣದಿಂದಾಗಿ ಶಸ್ತ್ರಚಿಕಿತ್ಸೆ ಮುಂದೂಡಬೇಕಾಗಿ ಬಂದಿತ್ತು.
ಎರಡೂವರೆ ವರ್ಷದ ಹೆಣ್ಣುಮಕ್ಕಳಾದ ಲಬೀಬಾ ಹಾಗೂ ಲಮೀಸಾ ಒಂದೇ ಬೆನ್ನುಮೂಳೆ, ಗುಪ್ತಾಂಗ ಹಾಗೂ ಕರುಳುಗಳನ್ನು ಹಂಚಿಕೊಂಡು ಹುಟ್ಟಿದ್ದಾರೆ. ಹುಟ್ಟಿದ ಒಂಬತ್ತು ದಿನಗಳಲ್ಲೇ ಇಬ್ಬರ ಗುದದ್ವಾರಗಳನ್ನು ವೈದ್ಯರು ಪ್ರತ್ಯೇಕಿಸಿದ್ದಾರೆ. ಆದರೆ ಕೋವಿಡ್ ಕೇಸುಗಳು ಹೆಚ್ಚಾದ ಕಾರಣ ಇದರ ಮುಂದಿನ ಶಸ್ತ್ರಚಿಕಿತ್ಸೆಯನ್ನು ಮುಂದೂಡಿಕೊಂಡು ಬರಲಾಗಿತ್ತು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ರಾಷ್ಟ್ರೀಯ ಸಹಾಯವಾಣಿ ಆರಂಭ
“ನನ್ನ ಮಕ್ಕಳಿಗೆ ಸರಿಯಾಗಿ ಕೂರಲು ಆಗುತ್ತಿಲ್ಲ. ಇಬ್ಬರನ್ನು ಸುಮ್ಮನಿರಿಸುವುದು ಭಾರೀ ಕಷ್ಟ. ಅವರ ಜನನವಾದಂದಿನಿಂದ ನಾನು ಮತ್ತು ನನ್ನ ಪತಿ ಸರಿಯಾಗಿ ನಿದ್ರೆಯನ್ನೇ ಮಾಡಿಲ್ಲ,” ಎಂದು ಹೇಳುವ ಮಕ್ಕಳ ತಾಯಿ ಮೋನುಫಾ ಬೇಗಂ, ತಮ್ಮ ಮಕ್ಕಳು ಸ್ವತಂತ್ರವಾಗಿ ನಡೆದಾಡುವ ದಿನವನ್ನು ನೋಡಲು ಉತ್ಸುಕರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಈ ಅವಳಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವೇ ಎಂದು ಅರಿಯಲು ಎರಡು ತಿಂಗಳು ಹಿಡಿದಿದ್ದು, 35 ವೈದ್ಯರ ತಂಡವು 10 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೆರವೇರಿಸಲಿದ್ದಾರೆ.
ಢಾಕಾ ವೈದ್ಯಕೀಯ ಕಾಲೇಜು ಚಿಕಿತ್ಸೆಯ ವೆಚ್ಚ ಭರಿಸಲಿದೆ. 2017 ಹಾಗೂ 2018ರಲ್ಲಿ ಇಂಥದ್ದೇ ಪ್ರಕರಣಗಳಿಗೆ ಯಶಸ್ವಿಯಾಗಿ ಪರಿಹಾರ ಕಂಡುಕೊಂಡಿದ್ದ ವೈದ್ಯರು ಈ ಬಾರಿಯೂ ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದಾರೆ.