
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಅಸಾಧ್ಯ ಎಂದು ಪಕ್ಷದ ನಾಯಕ ಗುಲಾಂ ನಬೀ ಆಜಾದ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅವರು, ಮುಂದಿನ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಪ್ರಶ್ನೆಗಳನ್ನು ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ತಮ್ಮದೇ ಪಕ್ಷದ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
2019ರಲ್ಲಿ ರದ್ದಾಗಿರುವ ಆರ್ಟಿಕಲ್ 370 ಮರು ಸ್ಥಾಪಿಸುವ ಬಗ್ಗೆ ಮತ್ತು ಈಡೇರಿಸಲು ಸಾಧ್ಯವಾಗದಿರುವ ಭರವಸೆಗಳನ್ನು ನೀಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಜನರನ್ನು ಮೆಚ್ಚಿಸಲು ನಮ್ಮ ಕೈಯಲ್ಲಿ ಈಡೇರಿಸಲಾಗದ ಭರವಸೆಗಳ ಬಗ್ಗೆ ಮಾತನಾಡುವುದಿಲ್ಲ. ನಕ್ಷತ್ರಗಳನ್ನು ಚಂದ್ರನನ್ನು ತಂದುಕೊಡಲು ಆಗುವುದಿಲ್ಲ ಎಂದು ಪೂಂಚ್ ನಲ್ಲಿ ನಡೆದ ರ್ಯಾಲಿಯಲ್ಲಿ ಅಜಾದ್ ಹೇಳಿದ್ದಾರೆ.