ಬೆಂಗಳೂರು: ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆ ಬ್ಲಾಕ್ ಮಾಡಲು ಕೋರ್ಟ್ ಆದೇಶ ನೀಡಿದೆ. ತಾತ್ಕಾಲಿಕವಾಗಿ ಖಾತೆಯನ್ನು ನಿರ್ಬಂಧಿಸಲು ಬೆಂಗಳೂರಿನ ಕೋರ್ಟ್ ಆದೇಶಿಸಿದೆ. ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆ ನಿರ್ಬಂಧಕ್ಕೂ ಕೋರ್ಟ್ ಸೂಚನೆ ನೀಡಿದೆ. ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದಿಂದ ಈ ಕುರಿತಾಗಿ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಲಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ‘ಕೆಜಿಎಫ್ 2’ ಹಾಡು ಬಳಕೆ ಹಿನ್ನೆಲೆಯಲ್ಲಿ ನವೆಂಬರ್ 21 ರವರೆಗೆ ಕಾಂಗ್ರೆಸ್ ಟ್ವಿಟರ್ ಖಾತೆ ಬ್ಲಾಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಐಎನ್ಸಿ ಟ್ವಿಟರ್ ಖಾತೆ ಬ್ಲಾಕ್ ಮಾಡಲು ಬೆಂಗಳೂರು ಕೋರ್ಟ್ ಆದೇಶ ನೀಡಿದೆ.
‘ಕೆಜಿಎಫ್ 2’ ಚಿತ್ರದ ಹಾಡು ಬಳಸಿದ್ದಕ್ಕೆ ಕಾಪಿ ರೈಟ್ ಉಲ್ಲಂಘನೆ ಬಗ್ಗೆ ಚಿತ್ರತಂಡ ದೂರು ನೀಡಿದ್ದು, ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನವೆಂಬರ್ 21 ರವರೆಗೆ ಟ್ವಿಟರ್ ಖಾತೆ ಬ್ಲಾಕ್ ಮಾಡಲು ಸೂಚಿಸಲಾಗಿದೆ ಎನ್ನಲಾಗಿದೆ.
‘ಕೆಜಿಎಫ್ 2’ ಚಿತ್ರಗೀತೆ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಾಣಿಜ್ಯ ಕೋರ್ಟ್ ಈ ಆದೇಶ ನೀಡಿದೆ. ಭಾರತ್ ಜೋಡೋ ಯಾತ್ರೆ ಖಾತೆ ಬ್ಲಾಕ್ ಮಾಡುವಂತೆಯೂ ಸೂಚನೆ ನೀಡಲಾಗಿದೆ. ಬೆಂಗಳೂರಿನ ವಾಣಿಜ್ಯ ಕೋರ್ಟ್ ನಿಂದ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಫೋರ್ಜರಿ ಕೇಸ್ ದಾಖಲಾಗಿತ್ತು. ಜೈರಾಂ ರಮೇಶ್, ಸುಪ್ರಿಯಾ ವಿರುದ್ಧವೂ ಕೇಸ್ ದಾಖಲಾಗಿತ್ತು. ‘ಕೆಜಿಎಫ್ 2’ ಚಿತ್ರದ ಗೀತೆನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಚಾರಕ್ಕೆ ಬಳಸಿದ್ದಾಗಿ ಆರೋಪಿಸಲಾಗಿತ್ತು.
ಎಂ.ಆರ್.ಟಿ. ಮ್ಯೂಸಿಕ್ ಕೇಸು ದಾಖಲಿಸಿತ್ತು. ಸುಲ್ತಾನ್ ಹಾಡನ್ನು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಬಳಸಿಕೊಂಡಿರುವುದಾಗಿ ಎಂ.ಆರ್.ಟಿ. ಮ್ಯೂಸಿಕ್ ದೂರು ನೀಡಿತ್ತು. ‘ಕೆಜಿಎಫ್ 2’ ಹಿಂದಿ ಹಕ್ಕು ಸ್ವಾಮ್ಯ ಪಡೆಯದೆ ಕಾಪಿರೈಟ್ ಉಲ್ಲಂಘಿಸಲಾಗಿದೆ ಎಂದು ಕಾಪಿರೈಟ್ ಉಲ್ಲಂಘನೆಯಡಿ ದೂರು ನೀಡಲಾಗಿತ್ತು. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.