alex Certify ಕಾಂಗ್ರೆಸ್ ಟಿಕೆಟ್ ಬಿಟ್ಟುಕೊಡಲು 30 ಕೋಟಿ ರೂ. ಆಮಿಷ: ಶಾಸಕ ವಿ. ಮುನಿಯಪ್ಪ ಗಂಭೀರ ಆರೋಪ: ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಟಿಕೆಟ್ ಬಿಟ್ಟುಕೊಡಲು 30 ಕೋಟಿ ರೂ. ಆಮಿಷ: ಶಾಸಕ ವಿ. ಮುನಿಯಪ್ಪ ಗಂಭೀರ ಆರೋಪ: ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಿಟ್ಟು ಕೊಡುವಂತೆ ಉದ್ಯಮಿಯ ಬೆಂಬಲಿಗರು 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಶಾಸಕ ವಿ. ಮುನಿಯಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಹಿಡಿತ ಸಾಧಿಸಿದ ವಿ. ಮುನಿಯಪ್ಪ ಮಾಡಿದ ಆರೋಪ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಉದ್ಯಮಿಯೊಬ್ಬರ ಕಡೆಯವರು ನಮ್ಮ ಮನೆಗೆ 30 ಕೋಟಿ ರೂಪಾಯಿ ಹಣ ತಂದಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಉದ್ಯಮಿಗೆ ಬಿಟ್ಟು ಕೊಡುವಂತೆ ಒತ್ತಾಯಿಸಿದ್ದರು. ನಾನು ಹಣ ತೆಗೆದುಕೊಂಡು ಹೋಗುವಂತೆ ಬೈದು ಕಳುಹಿಸಿದ್ದೇನೆ ಎಂದರು.

ಕಳೆದ 40 ವರ್ಷ ಕಾಂಗ್ರೆಸ್ ನಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವ ನನಗೆ ಇಂತಹ ವ್ಯವಹಾರ ಗೊತ್ತಿಲ್ಲ. ಕೊರೋನಾ ಸಂದರ್ಭದಲ್ಲಿ ಸಮಾಜ ಸೇವೆ ಹೆಸರಲ್ಲಿ ದಿಢೀರ್ ಶಿಡ್ಲಘಟ್ಟ ಕ್ಷೇತ್ರಕ್ಕೆ ಬಂದಿದ್ದ ಉದ್ಯಮಿ ಸಹಾಯ ಮಾಡುವ ನೆಪದಲ್ಲಿ 500 ರೂ., 1 ಸಾವಿರ ರೂ. ಕೊಟ್ಟಿದ್ದಾರೆ. ಅವರು 2 ಸಾವಿರ ರೂ.ಗಿಂತ ಹೆಚ್ಚಿನ ಹಣ ಚೆಕ್ ಮೂಲಕ ನೀಡಿದ್ದು, ಚೆಕ್ ಅಮಾನ್ಯವಾದ ಬಗ್ಗೆ ಅವರ ವಿರುದ್ಧ ಮೂರು ಎಫ್ಐಆರ್ ದಾಖಲಾಗಿವೆ. ಈ ಬಗ್ಗೆ ಕೆಪಿಸಿಸಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...