alex Certify ರಾಹುಲ್​ ʼಡ್ರಗ್​ ಪೆಡ್ಲರ್ʼ​​ ಎಂದಿದ್ದ ನಳೀನ್​ ಕುಮಾರ್​​ ​ಗೆ ಫಿನಾಯಿಲ್​ ಬಾಟಲಿ ಪಾರ್ಸಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್​ ʼಡ್ರಗ್​ ಪೆಡ್ಲರ್ʼ​​ ಎಂದಿದ್ದ ನಳೀನ್​ ಕುಮಾರ್​​ ​ಗೆ ಫಿನಾಯಿಲ್​ ಬಾಟಲಿ ಪಾರ್ಸಲ್​..!

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್​ ಪೆಡ್ಲರ್​ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​​​ ವಿರುದ್ಧ ಕೊಪ್ಪಳದ ಕಾಂಗ್ರೆಸ್​ ಮಹಿಳಾ ಘಟಕವು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ಕಾಂಗ್ರೆಸ್​ ನಾಯಕನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಳೀನ್​ ಕುಮಾರ್​ ಕಟೀಲ್ ​ಗೆ ಬಾಯಿ ತೊಳೆದುಕೊಳ್ಳಿ ಎಂದು ಕಾಂಗ್ರೆಸ್​ ಮಹಿಳಾ ಘಟಕದ ಸದಸ್ಯೆಯರು ಫಿನಾಯಿಲ್​ ಕಳುಹಿಸಿಕೊಟ್ಟಿದ್ದಾರೆ.

ಕೊಪ್ಪಳ ಅಂಚೆ ಕಚೇರಿ ಮೂಲಕ ಫಿನಾಯಿಲ್​​ ಬಾಟಲಿಯನ್ನು ನಳೀನ್​ ಕುಮಾರ್​ ಕಟೀಲ್​​ ಗೆ ಕಳುಹಿಸಲಾಗಿದೆ. ನಳೀನ್​ ಕುಮಾರ್​ ನಿಮ್ಮ ಹೊಸಲಿ ಬಾಯಿ ತೊಳೆದುಕೊಳ್ಳಿ ಎಂದು ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ರಾಹುಲ್​ ಗಾಂಧಿ ಒಬ್ಬ ಮಾದಕ ದ್ರವ್ಯ ವ್ಯಸನಿ ಹಾಗೂ ಡ್ರಗ್​ ಪೆಡ್ಲರ್​ ಆಗಿದ್ದಾರೆ. ಹೀಗಿರುವಾಗ ಅವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...