ಬೆಂಗಳೂರು: ವಿಧಾನಸಭಾ ನೂತನ ಸ್ಪೀಕರ್ ಆಗಿ ಮಾಜಿ ಸಚಿವ ಯು.ಟಿ.ಖಾದರ್ ಆಯ್ಕೆಯಾಗಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೂತನ ಸಭಾಪತಿ ಯು.ಟಿ. ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಅತ್ಯಂತ ಉತ್ಸಾಹಿ ಹಾಗೂ ಸಕ್ರಿಯ ರಾಜಕಾರಣಿ, 5 ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಿರಿ. ಸಚಿವರಾಗಿ ಕಾರ್ಯನಿರ್ವಹಿಸಿದ್ದಿರಿ. ಈಗ ಸ್ಪೀಕರ್ ಆಗಿ ಆಯ್ಕೆಯಾಗಿರುವುದು ಅಭಿನಂದನಾರ್ಹ ಎಂದರು.
2012ರಲ್ಲಿ ಅತಿಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸದನವೀರ ಪ್ರಶಸ್ತಿ ಕೂಡ ನಿಮಗೆ ನಿಡಲಾಗಿತ್ತು. ಒಬ್ಬ ಮಾದರಿ ಶಾಸಕರಾಗಿ ಕಾರ್ಯನಿರ್ವಿಸಿದ್ದಿರಿ ಎಂದು ಯು.ಟಿ. ಖಾದರ್ ಅವರನ್ನು ಶ್ಲಾಘಿಸಿದರು.