ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ 24 ಮುಖಂಡರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಶಿರಹಟ್ಟಿ -ರಾಮಕೃಷ್ಣ ದೊಡ್ಡಮನಿ
ಕುಣಿಗಲ್ – ರಾಮಸ್ವಾಮಿಗೌಡ
ಜಗಳೂರು –ಹೆಚ್.ಪಿ. ರಾಜೇಶ್
ಹರಪನಹಳ್ಳಿ –ಎಂ.ಪಿ. ಲತಾ ಮಲ್ಲಿಕಾರ್ಜುನ
ಅರಕಲಗೂಡು -ಕೃಷ್ಣೇಗೌಡ
ಬೀದರ್ ದಕ್ಷಿಣ –ಚಂದ್ರಸಿಂಗ್
ತರೀಕೆರೆ -ಗೋಪಿ ಕೃಷ್ಣ
ಖಾನಾಪುರ -ಇರ್ವಾನ್ ತಾಳಿಕೋಟೆ
ತೇರದಾಳ -ಡಾ. ಪದ್ಮಜಿತ್ ನಾಡಗೌಡ
ಹುಬ್ಬಳ್ಳಿ ಧಾರವಾಡ ಪಶ್ಚಿಮ -ಬಸವರಾಜ ಮಲ್ಕಾರಿ
ನೆಲಮಂಗಲ -ಉಮಾದೇವಿ
ಬೀದರ್ ದಕ್ಷಿಣ -ಯೂಸುಫ್ ಅಲಿ ಜಮದಾರ್
ಬೀದರ್ ದಕ್ಷಿಣ -ನಾರಾಯಣ ಬಂಗಿ
ಬೀದರ್ ದಕ್ಷಿಣ -ವಿಜಯಕುಮಾರ ಬರೂರು
ಮಾಯಕೊಂಡ -ಸವಿತಾ ಮಲ್ಲೇಶ ನಾಯ್ಕ್
ಶ್ರೀರಂಗಪಟ್ಟಣ –ಪಿ.ಹೆಚ್. ಚಂದ್ರಶೇಖರ್
ಶಿಡ್ಲಘಟ್ಟ -ಪುಟ್ಟು ಆಂಜನಪ್ಪ
ರಾಯಭಾಗ -ಶಂಭು ಕೋಲ್ಕಾರ್
ಶಿವಮೊಗ್ಗ ಗ್ರಾಮಾಂತರ- ಭೀಮಪ್ಪ
ಶಿಕಾರಿಪುರ –ಎಸ್.ಪಿ. ನಾಗರಾಜ ಗೌಡ
ತರೀಕೆರೆ -ದೋರನಾಳ್ ಪರಮೇಶ್ವರಪ್ಪ
ಬೀದರ್ –ಶಶಿ ಸೌದಿ
ಔರಾದ್ -ಲಕ್ಷ್ಮಣ ಸೊರಳಿ
ರಾಯಚೂರು ನಗರ -ಮುಜೀಬುದ್ದೀನ್ ಅವರನ್ನು ಪಕ್ಷದಿಂದ ಹುಚ್ಚಾಟಿಸಲಾಗಿದೆ.
ಇವರುಗಳಲ್ಲಿ ಕೆಲವರು ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇವರು ಮಾತ್ರವಲ್ಲದೇ, ಇನ್ನರಾದರೂ ಬಂಡಾಯವಾಗಿ ಸ್ಪರ್ಧಿಸಿದ್ದಾರೆ ಅವರಿಗೂ ಈ ಉಚ್ಚಾಟನೆ ಆದೇಶ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.