ನವದೆಹಲಿ: ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ.
ದೇಶಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡಿದ್ದು, ಜನಾಂದೋಲನವನ್ನು ರೂಪಿಸಿ ದೇಶಾದ್ಯಂತರ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷದಿಂದ ಸಮಿತಿಯನ್ನು ರಚಿಸಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಿತಿ ರಚಿಸಿದ್ದಾರೆ.
ದಿಗ್ವಿಜಯ್ ಸಿಂಗ್ ನೇತೃತ್ವದ ಸಮಿತಿಯನ್ನು ರಚಿಸಲಾಗಿದ್ದು, ಪ್ರಿಯಾಂಕಾ ಗಾಂಧಿ, ಉತ್ತಮ ಕುಮಾರ್ ರೆಡ್ಡಿ, ಉದಿತ್ ರಾಜ್, ಬಿ.ಕೆ. ಹರಿಪ್ರಸಾದ್ ಮನೀಶ್ ಚತ್ರತ್ ಸೇರಿದಂತೆ 9 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಕೋವಿಡ್, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ವಿರುದ್ದ ಎಐಸಿಸಿ ಕಮಿಟಿ ಜನಾಂದೋಲನ ರೂಪಿಸಲಿದೆ.