ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಬಯಸಿದ ಮಹಾರಾಷ್ಟ್ರದ ನಾಂದೇಡ್‌ನ ಶಾಲಾ ಬಾಲಕ ಸರ್ವೇಶ್ ಅವರಿಗೆ ಲ್ಯಾಪ್‌ಟಾಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಗುರುವಾರ ನಡೆದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ವೇಶ್ ನನ್ನು ಭೇಟಿಯಾಗಿದ್ದರು. ಈ ವೇಳೆ ಬಾಲಕ ಸರ್ವೇಶ್, ತಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂದು ಬಯಸಿದ್ದೇನೆ. ಆದರೆ ನಾನು ಕಂಪ್ಯೂಟರ್ ಅನ್ನು ನೋಡಿಲ್ಲ. ತನ್ನ ಶಾಲೆಯಲ್ಲಿ ಕಂಪ್ಯೂಟರ್ ಸಹ ಇಲ್ಲ ಎಂದು ಹೇಳಿದ್ದ.
ಗುರುವಾರ ಸಂಜೆ ರ್ಯಾಲಿಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ಸರ್ವೇಶ್ ನೊಂದಿಗಿನ ಭೇಟಿಯನ್ನು ಉಲ್ಲೇಖಿಸಿದ್ದರು. ಕಾಂಗ್ರೆಸ್ ಪಕ್ಷವು ನಂತರ ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿ ಸರ್ವೇಶ್ ಮತ್ತು ಅವರ ಸ್ನೇಹಿತನೊಂದಿಗೆ ರಸ್ತೆಯ ಬದಿಯಲ್ಲಿ ಕುಳಿತಿರುವ ವೀಡಿಯೊವನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ತಮ್ಮ ಸ್ವಂತ ಟ್ಯಾಬ್ಲೆಟ್ ತೋರಿಸುತ್ತಾ ಅದನ್ನು ಹೇಗೆ ಬಳಸಬೇಕೆಂದು ತೋರಿಸುತ್ತಿದ್ದರು.
ಬಳಿಕ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಾಲಕನಿಗೆ ಲ್ಯಾಪ್ ಟಾಪ್ ಕೊಡಿಸಿದ್ದಾರೆ.
ಕಾಂಗ್ರೆಸ್ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಸರ್ವೇಶ್ ಅವರಿಗೆ ಪಿಸಿ ಹಸ್ತಾಂತರಿಸಿದರು. ಇನ್ನಷ್ಟು ಅನ್ವೇಷಿಸಲು ಅವರಿಗೆ ಸಹಾಯ ಮಾಡಲು ನಮ್ಮ ಕಡೆಯಿಂದ ಒಂದು ಸಣ್ಣ ಗೆಸ್ಚರ್ ಎಂದು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.