ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಇಂದಿನಿಂದ ಎರಡನೇ ಹಂತದ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ನೀರಿಗಾಗಿ ನಡಿಗೆ ಪುನಾರಂಭವಾಗಲಿದ್ದು, ರಾಮನಗರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಚಾಲನೆ ನೀಡಲಿದ್ದಾರೆ. 5 ದಿನಗಳ ಕಾಲ 80 ಕಿಲೋಮೀಟರ್ ಪಾದಯಾತ್ರೆ ಕೈಗೊಳ್ಳಲಾಗಿದೆ.
ಕೊರೋನಾ ಹೊತ್ತಲ್ಲಿ ಜನವರಿ 9 ರಿಂದ ಆರಂಭವಾದ ಪಾದಯಾತ್ರೆ ಹೈಕೋರ್ಟ್ ಮಧ್ಯಪ್ರವೇಶದಿಂದ 4 ದಿನದಲ್ಲಿ ಮುಕ್ತಾಯವಾಗಿತ್ತು. ಕೊರೋನಾ ಕಡಿಮೆಯಾಗಿರುವುದರಿಂದ ಎರಡನೇ ಹಂತದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತು ಭಾಗಿಯಾಗಲಿದ್ದಾರೆ.