ಕೇರಳದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದದ್ದಾರೆ. ಸೆಮಿ ಹೈಸ್ಪೀಡ್ ರೈಲು ಶೋರನೂರು ಜಂಕ್ಷನ್‌ಗೆ ಬಂದಾಗ ಕಾಂಗ್ರೆಸ್ ಸಂಸದ ವಿ.ಕೆ. ಶ್ರೀಕಂದನ್ ಅವರ ಪೋಸ್ಟರ್ ಗಳನ್ನು ಹಚ್ಚಿರುವುದು ಕಂಡು ಬಂದಿದೆ.
ಶೋರನ್‌ಪುರ ಜಂಕ್ಷನ್ ನಲ್ಲಿ ರೈಲು ನಿಲುಗಡೆಗೆ ಶ್ರೀಕಂದನ್ ಕಾರಣರಾಗಿದ್ದಾರೆ ಎಂದು ಅವರ ಬೆಂಬಲಿಗರು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ರೈಲು ಶೋರನ್‌ಪುರ ಜಂಕ್ಷನ್‌ಗೆ ಬಂದಾಗ ಪಲ್ಕಾಡ್ ಸಂಸದರು ಮತ್ತು ಅವರ ಬೆಂಬಲಿಗರು ರೈಲಿನ ಆಗಮನವನ್ನು ಸ್ವಾಗತಿಸಲು ಹಾಜರಿದ್ದರು. ನಂತರ ಪೋಸ್ಟರ್‌ಗಳನ್ನು ಆರ್‌ಪಿಎಫ್ ಸಿಬ್ಬಂದಿ ತೆಗೆದುಹಾಕಿದ್ದಾರೆ.
ರಾಜಧಾನಿ ತಿರುವನಂತಪುರಂ ಮತ್ತು ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು,. ಕೊಟ್ಟಾಯಂ, ಕೊಲ್ಲಂ, ಎರ್ನಾಕುಲಂ ಟೌನ್, ತ್ರಿಶೂರ್, ಶೋರನೂರು ಜಂಕ್ಷನ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಸಂಸದರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಘಟನೆಯನ್ನು ಖಂಡಿಸಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ವಿರೂಪಗೊಳಿಸಿರುವುದು ಕೇರಳ ಕಾಂಗ್ರೆಸ್ ಕಾರ್ಯಕರ್ತರ ‘ನೀಚ ಚಟುವಟಿಕೆ’ ಎಂದು ಹೇಳಿದ್ದಾರೆ.