ನವದೆಹಲಿ: ಸದನದ ಕಲಾಪಗಳ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದರಾದ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಖರ್ ಅಮಾನತುಗೊಳಿಸಿದ್ದಾರೆ.
ಧನ್ಯವಾದ ನಿರ್ಣಯಕ್ಕೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆಯನ್ನು ಪ್ರತಿಪಕ್ಷದ ಶಾಸಕರು ಪ್ರತಿಭಟಿಸಿದ ವೀಡಿಯೊವನ್ನು ಸದನದ ಒಳಗಿನಿಂದ ಟ್ವೀಟ್ ಮಾಡಿದ ನಂತರ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ ಖರ್ ಅವರು, ಇದು ಗಂಭೀರ ವಿಷಯ. ಅಹಿತಕಾರಿ ಚಟುವಟಿಕೆ ಎಂದು ಹೇಳಿದ್ದಾರೆ.
ನಿನ್ನೆ ಟ್ವಿಟ್ಟರ್ ನಲ್ಲಿ ಈ ಸದನದ ಕಲಾಪಕ್ಕೆ ಸಂಬಂಧಿಸಿದ ವೀಡಿಯೊವನ್ನು ಪ್ರಸಾರ ಮಾಡಲಾಗಿತ್ತು. ರಜನಿ ಅಶೋಕರಾವ್ ಪಾಟೀಲ್ ಈ ಅಹಿತಕರ ಚಟುವಟಿಕೆಯಲ್ಲಿ ತೊಡಗಿದ್ದು ಗಮನಿಸಬೇಕಾದ ವಿಷಯ. ಸಂಸತ್ತಿನ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.