![](https://kannadadunia.com/wp-content/uploads/2023/04/1600x960_1139289-r-ashoka.jpg)
ಬೆಂಗಳೂರು : ಕಾಂಗ್ರೆಸ್ ನ ಮಾನಸಿಕ ಸ್ಥಿತಿ ದೇಶಕ್ಕೆ ಗಂಡಾಂತರ ಉಂಟು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮನಸ್ಸನ್ನು ಕಾಂಗ್ರೆಸ್ ಕಲುಷಿತಗೊಳಿಸಿದೆ. ಕಾಂಗ್ರೆಸ್ ಮಾನಸಿಕ ಸ್ಥಿತಿ ದೇಶಕ್ಕೆ ಗಂಡಾಂತರ ಉಂಟುಮಾಡಿದೆ. ಭಯೋತ್ಪಾದಕರ ಬಗ್ಗೆ ರಾಜ್ಯ ಸರ್ಕಾರ ಸಾಫ್ಟ್ ಕಾರ್ನರ್ ಹೊಂದಿದೆ. ಇದರಿಂದ ಆರೋಪಿ ಬಾಂಬ್ ಇಟ್ಟು ಆರಾಮಾಗಿ ಹೋಗಿದ್ದಾನೆ ಎಂದು ಕಿಡಿಕಾರಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಉಗ್ರ ಮೊಬೈಲ್ ನೋಡಿಕೊಂಡು ಆರಾಮಾಗಿ ಹೋಗಿದ್ದಾನೆ. ಬಾಂಬ್ ಇಟ್ಟು ಆರೋಪಿ ವಿದೇಶಕ್ಕೆ ಹೋಗಿರುತ್ತಾನೆ. ಪಾಕ್ ಪರ ಘೋಷಣೆ ಕೂಗಿದಾಗಲೇ ನಾನು ಹೇಳಿದ್ದೆ.ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಾಂಬ್ ಇಡುತ್ತಾರೆ ಅಂತ ಹೇಳಿದ್ದೆ. ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ನಾನು ಹೇಳಿದಂತೆ ಈಗ ಊಗ್ರರು ಬಾಂಬ್ ಇಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.