ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಾಂಗ್ರೆಸ್ ಗೆ ಆಘಾತಗಳು ಸವಾಲಾಗಿ ಕಾಡ್ತಿದೆ. ಮುಂದಿನ ವರ್ಷ ಮೇಘಾಲಯದಲ್ಲಿ ಚುನಾವಣೆ ಇರುವಾಗ್ಲೇ ಮಾಜಿ ಸಚಿವೆ , ಕಾಂಗ್ರೆಸ್ ನಾಯಕಿ ಡಾ. ಅಂಪಾರೀನ್ ಲಿಂಗ್ಡೋಹ್ ಪಕ್ಷ ತೊರೆದಿದ್ದಾರೆ.
ಮತ್ತೊಬ್ಬ ಶಾಸಕರೊಂದಿಗೆ, ಲಿಂಗ್ಡೋಹ್ ಆಡಳಿತಾರೂಢ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ)ಗೆ ಸೇರಲು ಸಿದ್ಧರಾಗಿದ್ದಾರೆ. ಎನ್‌ಪಿಪಿ ಬಿಜೆಪಿಯ ಮಿತ್ರಪಕ್ಷವಾಗಿದೆ.
ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಪತ್ರದ ಪ್ರತಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಪತ್ರದಲ್ಲಿ, “ನನ್ನ ಜೀವನದಲ್ಲಿ ಸುದೀರ್ಘ ಸಮಯದವರಗೆ ನಾನು ಕಾಂಗ್ರೆಸ್ ನ ಆಳಾಗಿ ಕೆಲಸ ಮಾಡಿದ್ದೇನೆ. ಆದಾಗ್ಯೂ, ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳು ಅದು ತನ್ನ ದಿಕ್ಕಿನ ಪ್ರಜ್ಞೆಯನ್ನು ಕಳೆದುಕೊಂಡಿದೆ ಎಂದು ನಾನು ನಂಬುವಂತೆ ಮಾಡಿದೆ. ಪಕ್ಷ ಮತ್ತು ನಾಯಕತ್ವವು ಈ ಬಗ್ಗೆ ಪ್ರತಿಬಿಂಬಿಸುವ ತುರ್ತು ಅವಶ್ಯಕತೆಯಿದೆ” ಎಂದಿದ್ದಾರೆ.
ಮೇಘಾಲಯ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ಎದುರಿಸಲಿದೆ.