ಕೊಪ್ಪಳ : ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಮೂಲ ಕಾರಣ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ, ನಾನು ಮುಸ್ಲಿಂ ಅನ್ನೋ ಕಾರಣಕ್ಕೆ, ಮುಸ್ಲಿಂ ನಾಯಕ ಬೆಳೆಯಬಾರದು ಎಂದು ನನ್ನ ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಸೋಲಿಗೆ ಕಾಂಗ್ರೆಸ್ ಹಲವು ನಾಯಕರು ಕಾರಣ, ಮನೆ ಮನೆಗೆ ಹೋಗಿ ಮೋಸದ ಬಗ್ಗೆ ಅರಿವು ಮೂಡಿಸುತ್ತೇನೆ. ಲೋಕಸಭೆ ಚುನಾವಣೆ ಬಳಿಕ ದೊಡ್ಡ ರಾಜಕೀಯ ತಿರುವಾಗುತ್ತದೆ ಎಂದು ಹೇಳಿದ್ದಾರೆ.