ಕಾಂಗ್ರೆಸ್‌ನ ‘ಲಡ್ಕಿ ಹೂಂ ಲಡ್ ಸಕ್ತಿ ಹೂ’ ಅಭಿಯಾನದ ಮತ್ತೊಬ್ಬ ಪೋಸ್ಟರ್ ಗರ್ಲ್ ಪಲ್ಲವಿ ಸಿಂಗ್ ಅವರು ಇಂದು, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಈ ಹಿಂದೆ, ಕಾಂಗ್ರೆಸ್‌ನ ‘ಲಡ್ಕಿ ಹೂಂ ಲಾಡ್ ಸಕ್ತಿ ಹೂ’ ಅಭಿಯಾನದ ಎರಡು ಮುಖಗಳು ಎಂದು ಗುರುತಿಸಿಕೊಂಡಿದ್ದ, ಪ್ರಿಯಾಂಕಾ ಮೌರ್ಯ ಮತ್ತು ವಂದನಾ ಸಿಂಗ್ ಸಹ ಬಿಜೆಪಿಗೆ ಸೇರಿದ್ದರು.
ಬುಧವಾರ, ಹೈಕಮಾಂಡ್ ನೀತಿಯನ್ನ ವಿರೋಧಿಸಿ ಬಿಜೆಪಿ ಸೇರ್ಪಡೆಯಾಗಿದ್ದ ವಂದನಾ ಸಿಂಗ್, ಕಾಂಗ್ರೆಸ್ ಪಕ್ಷವು “ಇತ್ತೀಚೆಗೆ ಸೇರ್ಪಡೆಗೊಂಡವರಿಗೆ” ಮಾತ್ರ ಅವಕಾಶಗಳನ್ನು ನೀಡುತ್ತಿದೆ ಎಂದು ದೂಷಿಸಿದ್ದರು. ನಾನು ಕಳೆದ ಆರು ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿದ್ದೆ, ಆದರೆ ನಮಗೆ ಪ್ರಿಯಾಂಕ ಗಾಂಧಿ ಅವ್ರೊಂದಿಗೆ ಮಾತನಾಡುವ ಅವಕಾಶವಿರಲಿಲ್ಲ. ಅಲ್ಲಿ ನಮ್ಮ ಬಗ್ಗೆ ನಮಗೆ ಮಾತನಾಡಲು ಆಗುತ್ತಿರಲಿಲ್ಲ ಎಂದು ವಂದನಾ ಸಿಂಗ್ ಆರೋಪಿಸಿದ್ದರು.
ವಿವಾದಿತ ಸ್ಥಳದಲ್ಲಿ ರಾತ್ರೋರಾತ್ರಿ ದೇವರ ಪ್ರತಿಮೆಗಳ ಪ್ರತಿಷ್ಠಾಪನೆ: ಜಾಗಕ್ಕಾಗಿ ಜಟಾಪಟಿ
ಉತ್ತರ ಪ್ರದೇಶ ಚುನಾವಣೆಗೆ ಸಬಂಧಿಸಿದಂತೆ, ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಿಯಾಂಕಾ ಮೌರ್ಯ ಆರೋಪಿಸಿದ್ದರು. ಲಡ್ಕಿ ಹೂಂ ಲಡ್ ಸಕ್ತಿ ಹೂಂ’ ಎಂಬುದು ಕೇವಲ ಘೋಷಣೆ ಅಷ್ಟೇ. ಏಕೆಂದರೆ ‘ಲಡ್ಕಿ’ಯಾಗಿದ್ದ ನನಗೆ ಲಂಚ ನೀಡಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ನನಗೆ ಟಿಕೆಟ್ ನೀಡುವ ಬದಲು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ.
ನಾನು ಪಕ್ಷದ ನಿಯಮದಂತೆ ನಡೆದುಕೊಂಡೆ, ಎಲ್ಲಾ ವಿಧಿಗಳನ್ನು ಪೂರ್ಣಗೊಳಿಸಿದೆ. ಆದರೆ ಟಿಕೆಟ್ ಅನ್ನು ಯಾರಿಗೆ ನೀಡಬೇಕೆಂದು ಮೊದಲೇ ಯೋಜಿಸಲಾಗಿತ್ತು. ಕೇವಲ ಒಂದು ತಿಂಗಳ ಹಿಂದೆ ಬಂದ ವ್ಯಕ್ತಿಗೆ ಟಿಕೆಟ್ ನೀಡಲಾಯಿತು. ಇಂತಹ ಕೆಲಸಗಳು ತಳಮಟ್ಟದಲ್ಲಿ ನಡೆಯುತ್ತಿವೆ, ಇದರ ಬಗ್ಗೆ ಗಮನಕೊಡಿ ಎಂದು ಪ್ರಿಯಾಂಕಾ ಮೌರ್ಯ, ಪ್ರಿಯಾಂಕ ಗಾಂಧಿ ವಿರುದ್ಧ ಕಿಡಿಕಾರಿದ್ದರು.