ಗದಗ: ನಮ್ಮ ಸರ್ಕಾರಕ್ಕೆ 140 ಶಾಸಕರ ಬೆಂಬಲವಿದ್ದು, ಈಗಾಗಲೇ ಇಬ್ಬರು ಬಂದಿದ್ದಾರೆ, ಉಳಿದವರು ನಮ್ಮೊಂದಿಗೆ ಇದ್ದಾರೆ. ಅದನ್ನು ಇಲ್ಲಿ ಹೇಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಪ್ರತಿಪಕ್ಷದ ಇನ್ನಷ್ಟು ಮಂದಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ. ರೋಣ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದವರು.
ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳ ಮಕ್ಕಳಿಗೆ ಜನ ರೆಸ್ಟ್ ನೀಡಿದ್ದಾರೆ. ಇಬ್ಬರು ಶಾಸಕರು ಈಗಾಗಲೇ ನಮ್ಮೊಂದಿಗೆ ಇದ್ದು ನಮ್ಮ ಸರ್ಕಾರಕ್ಕೆ 140 ಶಾಸಕರ ಬೆಂಬಲವಿದೆ. ಇನ್ನುಳಿದವರು ನಮ್ಮೊಂದಿಗೆ ಇದ್ದಾರೆ. ಅದನ್ನು ಈಗ ಹೇಳುವುದಿಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ.