ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷ 48 -50 ಸ್ಥಾನ ಗಳಿಸುವ ಮೂಲಕ ಮುಂದಿನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಭವವಿದೆ ಎಂದು ಸಿ.ಹೆಚ್.ಎಸ್. ಪೋಲ್ಸ್ ಆರ್ಗನೈಸೇಷನ್ ನಡೆಸಿದ ಚುನಾವಣೆ ಪೂರ್ವ ಸಮೀಕ್ಷ ವರದಿಯಲ್ಲಿ ತಿಳಿದು ಬಂದಿದೆ.
ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಅಭಿಪ್ರಾಯ ಆಧರಿಸಿ ಸಿಹೆಚ್ಎಸ್ ಪೋಲ್ಸ್ ಆರ್ಗನೈಜೇಷನ್ ಸಮೀಕ್ಷೆ ನಡೆಸಿದೆ. ಗ್ರಾಮೀಣ ಪ್ರದೇಶ, ನಗರ, ಪಟ್ಟಣಗಳಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವಲಯದ ಮತದಾರರ ಮನದಾಳವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಮತದಾರರ ಅಭಿಪ್ರಾಯ ಆಧರಿಸಿ ರಾಜಕೀಯ ಪಕ್ಷದ ಪರ ಮತದಾರರ ಒಲವು ಹೇಗಿದೆ ಎಂಬುದನ್ನು ಅಂಕಿ ಅಂಶಗಳ ಸಹಿತ ಮಾಹಿತಿ ಸಂಗ್ರಹಿಸಲಾಗಿದೆ.
ಬಿಜೆಪಿ 80 ರಿಂದ 89 ಸ್ಥಾನ, ಕಾಂಗ್ರೆಸ್ 80 ರಿಂದ 86 ಸ್ಥಾನ, ಜೆಡಿಎಸ್ 48 ರಿಂದ 50 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಸರ್ಕಾರ ರಚನೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.