
ಉಡುಪಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗಡೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಡುಪಿಯ ಜಾರಂದಾಯ ದೇವಸ್ಥಾನದ ಧಾರ್ಮಿಕ ಉತ್ಸವಕ್ಕೆ ತೆರಳಿದ್ದ ಜಯಪ್ರಕಾಶ್ ಹೆಗಡೆ ಅವರು ಚುನಾವಣೆ ಸಂಬಂಧಿತ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಪು ತಾಲೂಕಿನ ಫ್ಲೈಯಿಂಗ್ ಸ್ಕ್ವಾಡ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.