ಹೈದರಾಬಾದ್: ರೈತರ ಎರಡು ಲಕ್ಷ ರೂಪಾಯಿ ಸಾಲ ಮನ್ನಾವನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, ಡಿಸೆಂಬರ್ 12, 2018 ರಿಂದ ಡಿಸೆಂಬರ್ 9, 2023 ರ ಅವಧಿಯಲ್ಲಿ ರೈತರು ಪಡೆದಿರುವ ಎರಡು ಲಕ್ಷ ರೂ.ವರೆಗಿನ ಸಾಲವನ್ನು ಒಂದೇ ಬಾರಿಗೆ ಮನ್ನಾ ಮಾಡಲಾಗುವುದು.
ನಮ್ಮ ಸರ್ಕಾರವು ಡಿಸೆಂಬರ್ 12, 2018 ರಿಂದ ಡಿಸೆಂಬರ್ 9, 2023 ರವರೆಗೆ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ರೈತರು ಪಡೆದಿರುವ ಎರಡು ಲಕ್ಷ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲು ಸಂಪುಟದಲ್ಲಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಅರ್ಹತಾ ಷರತ್ತುಗಳು ಸೇರಿದಂತೆ ಸಾಲ ಮನ್ನಾ ವಿವರಗಳನ್ನು ಶೀಘ್ರದಲ್ಲೇ ಸರ್ಕಾರಿ ಆದೇಶದಲ್ಲಿ (ಜಿಒ) ಪ್ರಕಟಿಸಲಾಗುವುದು. ಸಾಲ ಮನ್ನಾದಿಂದ ರಾಜ್ಯದ ಖಜಾನೆಗೆ ಸುಮಾರು 31,000 ಕೋಟಿ ರೂ. ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.