ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡು ಇಂದಿಗೆ 137 ವರ್ಷ. ಈ ಸಲುವಾಗಿ ದೆಹಲಿಯ ಪ್ರಧಾನ ಕಛೇರಿಯಲ್ಲಿ ಪಕ್ಷದ 137 ನೇ ಸಂಸ್ಥಾಪನಾ ದಿನವನ್ನ ಆಚರಿಸಲಾಗಿದೆ. ಆದರೆ ಈ ವೇಳೆ ಪಕ್ಷದ ಧ್ವಜವೇ ಆರೋಹಣಗೊಳ್ಳದೆ ಕೆಳಗೆ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಧ್ವಜವನ್ನ ಹಾರಿಸಲು ಪ್ರಯತ್ನಿಸಿದಾಗ ಧ್ವಜವು ಅವರ ಕೈಮೇಲೆ ಬಿದ್ದಿದೆ. ಅಧ್ಯಕ್ಷೆ ಧ್ವಜಾರೋಹಣ ಮಾಡಿದರು ಧ್ವಜ ಹಾರಲಿಲ್ಲ
ಸೋನಿಯಾ ಗಾಂಧಿ ಅದನ್ನು ಹಾರಿಸಲು ಪ್ರಯತ್ನಿಸಿದಾಗ ಧ್ವಜವು ಕೆಳಗೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆನಂತರ ಧ್ವಜಾರೋಹಣ ಮಾಡಲು ಅಲ್ಲಿದ್ದ ಕಾರ್ಯಕರ್ತರು ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ.
ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ಸೋನಿಯಾ ಗಾಂಧಿ ಅವರು ಪಕ್ಷದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿ ಗೌರವ ಸೂಚಿಸಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಕ್ಷದ ತ್ರಿವರ್ಣ ಧ್ವಜವನ್ನು ಹಾರಿಸಲು ಧ್ವಜಸ್ತಂಭವನ್ನು ಏರಿದರು. ಪಕ್ಷದ ಕೇಂದ್ರ ಕಚೇರಿಯಲ್ಲಿ ಈ ಕಾರ್ಯಕ್ರಮ ನೆರವೇರಿದ್ದು ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.