ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಬುಧವಾರ ರಾಜ್ಯಗಳಿಗೆ ಸಂವಹನ ಸಂಯೋಜಕರನ್ನು ನೇಮಿಸಿದೆ.
ಪಕ್ಷದ ವಕ್ತಾರ ಗೌರವ್ ವಲ್ಲಭ್ ಅವರನ್ನು ಕರ್ನಾಟಕದ ಸಂವಹನ ಸಂಯೋಜಕರಾಗಿ ನೇಮಿಸಲಾಗಿದೆ, ರಾಧಿಕಾ ಖೇರಾ ಅವರಿಗೆ ಛತ್ತೀಸ್‌ಗಢದ ಜವಾಬ್ದಾರಿಯನ್ನು ನೀಡಲಾಗಿದೆ, ಮ್ಯಾಥ್ಯೂ ಆಂಟನಿ ಈಶಾನ್ಯ ರಾಜ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಮಹಿಮಾ ಸಿಂಗ್ ಅಸ್ಸಾಂ ನೋಡಿಕೊಳ್ಳುತ್ತಾರೆ.
ಇತರ ಸಂವಹನ ಸಂಯೋಜಕರು ಬಿ.ಆರ್. ಅನಿಲ್ ಕುಮಾರ್(ಆಂಧ್ರ ಪ್ರದೇಶ), ಅಲೋಕ್ ಶರ್ಮಾ(ಬಿಹಾರ), ಹರ್ಷದ್ ಶರ್ಮಾ(ಗೋವಾ), ಸಚಿನ್ ಸಾವಂತ್(ಗುಜರಾತ್), ಅಜಯ್ ಉಪಾಧ್ಯಾಯ(ಹರಿಯಾಣ), ಅಮೃತ್ ಗಿಲ್(ಹಿಮಾಚಲ ಪ್ರದೇಶ), ಜ್ಯೋತಿ ಕುಮಾರ್ ಸಿಂಗ್(ಜಾರ್ಖಂಡ್) , ಅರ್ಶ್‌ಪ್ರೀತ್ ಖಡಿಯಾಲ್(ಜಮ್ಮು), ಪರ್ವೇಜ್ ಆಲಂ(ಕಾಶ್ಮೀರ ಮತ್ತು ಲಡಾಖ್), ಲಾವಣ್ಯ ಬಲ್ಲಾಲ್ ಜೈನ್(ಕೇರಳ), ಚರಣ್ ಸಿಂಗ್ ಸಪ್ರಾ(ಮಧ್ಯಪ್ರದೇಶ), ಸುರೇಂದ್ರ ಸಿಂಗ್ ರಜಪೂತ್(ಮಹಾರಾಷ್ಟ್ರ), ಬೊಬ್ಬೀತಾ ಶರ್ಮಾ(ಒಡಿಶಾ), ಅನ್ಶುಲ್ ಅವಿಜಿತ್(ಪಂಜಾಬ್), ರಿತು ಚೌಧರಿ(ರಾಜಸ್ಥಾನ), ಭವ್ಯ ನರಸಿಂಹಮೂರ್ತಿ(ತಮಿಳುನಾಡು ಮತ್ತು ಪುದುಚೇರಿ), ಸುಜಾತಾ ಪಾಲ್(ತೆಲಂಗಾಣ), ಚಯಾನಿಕಾ ಉನಿಯಾಲ್(ಉತ್ತರಾಖಂಡ), ಅಭಯ್ ದುಬೆ(ಉತ್ತರ ಪ್ರದೇಶ) ಮತ್ತು ಅಂಶುಮಾನ್ ಸೈಲ್(ಪಶ್ಚಿಮ ಬಂಗಾಳ).
ಮಾಧ್ಯಮ ಮತ್ತು ಸಂವಹನ ಸಂಬಂಧಿತ ಚಟುವಟಿಕೆಗಳ ಸುಗಮ ಕಾರ್ಯನಿರ್ವಹಣೆಗಾಗಿ ಹೊಸದಾಗಿ ನೇಮಕಗೊಂಡಿರುವ ಸಂವಹನ ಸಂಯೋಜಕರು ರಾಜ್ಯ ಪಕ್ಷದ ಘಟಕಗಳು ಮತ್ತು ಎಐಸಿಸಿ ಸಂವಹನ ವಿಭಾಗದೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.