ಮಣಿಪುರ : ಕಾಂಗ್ರೆಸ್ ನ ‘ಭಾರತ್ ನ್ಯಾಯ್ ಯಾತ್ರೆ’ಗೆ ಅನುಮತಿ ನೀಡದಿರುವ ಕೋಲಾಹಲದ ನಂತರ, ರಾಜ್ಯ ಸರ್ಕಾರ ಈಗ ಕೆಲವು ಷರತ್ತುಗಳೊಂದಿಗೆ ರ್ಯಾಲಿ ನಡೆಸಲು ಪಕ್ಷಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.
ಭಾಗವಹಿಸುವವರ ಹೆಸರನ್ನು ಮುಂಚಿತವಾಗಿ ನೋಂದಾಯಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜನವರಿ 14ರಂದು ಇಂಫಾಲ್ ನಿಂದ ಯಾತ್ರೆ ಆರಂಭವಾಗಲಿದೆ.
ಇದಕ್ಕೂ ಮುನ್ನ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಕೆ.ಮೇಘಚಂದ್ರ ಅವರು ಪಕ್ಷದ ನಾಯಕರ ನಿಯೋಗದೊಂದಿಗೆ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರನ್ನು ಅವರ ಕಚೇರಿ ಸಂಕೀರ್ಣ ಮತ್ತು ಬಂಗಲೆಯಲ್ಲಿ ಭೇಟಿಯಾದರು.
ಜ.14ರಂದು ಕಾಂಗ್ರೆಸ್ ಪಕ್ಷವು ಹಿಂಸಾಚಾರ ಪೀಡಿತ ಮಣಿಪುರದಿಂದ ‘ಭಾರತ ಜೋಡೋ ನ್ಯಾಯ ಯಾತ್ರೆ’ ಆರಂಭಿಸುವ ಗುರಿಯನ್ನು ಹೊಂದಿತ್ತು. ಆದರೆ ಇದಕ್ಕೆ ಮಣಿಪುರ ರಾಜ್ಯ ಸರಕಾರ ಇನ್ನೂ ಅನುಮತಿ ನೀಡಿರಲಿಲ್ಲ, ಇದೀಗ ಕೆಲವು ಷರತ್ತುಗಳೊಂದಿಗೆ ರ್ಯಾಲಿ ನಡೆಸಲು ಪಕ್ಷಕ್ಕೆ ಅನುಮತಿ ನೀಡಲಾಗಿದೆ ಎನ್ನಲಾಗಿದೆ.