alex Certify ‌ʼಮೊಹರೆ ಹಣಮಂತರಾವ್ ಮಾಧ್ಯಮ ಪ್ರಶಸ್ತಿʼ ಪುರಸ್ಕೃತ ಹಿರಿಯ ಪತ್ರಕರ್ತ ‘ಕ್ರಾಂತಿದೀಪ’ ಮಂಜುನಾಥ್ ರವರಿಗೆ‌ ನಾಳೆ ಅಭಿನಂದನಾ ಸಮಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೊಹರೆ ಹಣಮಂತರಾವ್ ಮಾಧ್ಯಮ ಪ್ರಶಸ್ತಿʼ ಪುರಸ್ಕೃತ ಹಿರಿಯ ಪತ್ರಕರ್ತ ‘ಕ್ರಾಂತಿದೀಪ’ ಮಂಜುನಾಥ್ ರವರಿಗೆ‌ ನಾಳೆ ಅಭಿನಂದನಾ ಸಮಾರಂಭ

ಶಿವಮೊಗ್ಗ: ಮೊಹರೆ ಹಣಮಂತ ರಾವ್ ಮಾಧ್ಯಮ ಪ್ರಶಸ್ತಿ ಪಡೆದ ಕ್ರಾಂತಿದೀಪ ಎನ್.ಮಂಜುನಾಥ್ ಅವರನ್ನು ಡಿ.7ರಂದು ಬೆಳಿಗ್ಗೆ 10.30ಕ್ಕೆ ಪತ್ರಿಕಾ ಭವನದಲ್ಲಿ ಅಭಿನಂದಿಸಲಾಗುವುದು ಎಂದು ಕ್ರಾಂತಿದೀಪ ಎನ್. ಮಂಜುನಾಥ್ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಹೇಳಿದರು.

ಅವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್. ಮಂಜುನಾಥ್ ಅವರು ಕರ್ನಾಟಕ ಸರ್ಕಾರ ಕೊಡುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವುದು ಪತ್ರಿಕಾ ಬಳಗಕ್ಕೆ ಶೋಭೆ ತಂದಿದೆ. ಈ ಹಿನ್ನಲೆಯಲ್ಲಿ ಇವರನ್ನು ಅಭಿನಂದಿಸಲಾಗುತ್ತಿದೆ ಎಂದರು.

ನಾಳೆ ಬೆಳಿಗ್ಗೆ 10.30ಕ್ಕೆ ಪತ್ರಿಕಾ ಭವನದಲ್ಲಿ ನಡೆಯುವ ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ನೆರವೇರಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಎಂ. ಶ್ರೀಕಾಂತ್, ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಉಪಸ್ಥಿತರಿರುವರು.

ಕನ್ನಡ ಮೀಡಿಯಂ ಚಾನಲ್‌ನ ಹೊನ್ನಾಳಿ ಚಂದ್ರಶೇಖರ್, ಅಭಿನಂದನಾ ನುಡಿಗಳನ್ನಾಡುವರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.

ಕ್ರಾಂತಿದೀಪ ಎನ್.ಮಂಜುನಾಥ್‌ರವರು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿ ಕಳೆದ 40 ವರ್ಷಗಳಿಂದ ಸ್ಥಳೀಯ ಪತ್ರಿಕೆಯನ್ನು ನಡೆಸುತ್ತ ಬಂದಿದ್ದು, ಪ್ರಾದೇಶಿಕ ಮಟ್ಟಕ್ಕೆ ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಹಿಂದೆ ಅವರ ಅಪಾರ ಶ್ರಮವಿದೆ. ಇದಲ್ಲದೆ ಹಲವು ಸಾಮಾಜಿಕ ಸಂಘಟನೆಗಳಲ್ಲಿಯೂ ಇವರ ಪಾತ್ರವಿದೆ. ಇವರ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ಅವರನ್ನು ಗೌರವಿಸಬೇಕು ಎನ್ನುವುದು, ನಮ್ಮ ಉದ್ದೇಶವಾಗಿದೆ ಎಂದ ಅವರು, 72 ಪುಟಗಳುಳ್ಳ ಅಭಿನಂದನ ಗ್ರಂಥದಲ್ಲಿ 24 ಲೇಖನಗಳಿವೆ ಎಂದರು.

ಅಭಿನಂದನಾ ಸಮಿತಿಯ ಅ.ನಾ. ವಿಜಯೇಂದ್ರ ಮಾತನಾಡಿ, ಕ್ರಾಂತಿದೀಪ ಮಂಜುನಾಥ್ ಕಳೆದ 4 ದಶಕಗಳಿಂದ ಪತ್ರಿಕೋದ್ಯಮದಲ್ಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ. ಮಣಿಪಾಲ್ ಕಾರ್ಡ್ ಕೊಡಿಸುವಲ್ಲಿ ಅವರ ಪಾತ್ರವೂ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಾಗೀಶ್, ದೇವಕುಮಾರ್, ಶಾಂತಾಶೆಟ್ಟಿ, ಶಾಂತಾ ಸುರೇಂದ್ರ ಉಪಸ್ಥಿತರಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...