ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ತಂಡ ಫೈನಲ್ ಪ್ರವೇಶಿದ್ದು, ಇಡೀ ಭಾರತವೇ ಸಂಭ್ರಮಿಸಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
ಇದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿರುವ ಟ್ವೀಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ಸಚಿವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ತಂಡ ಫೈನಲ್ ಪ್ರವೇಶಿದ್ದು, ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಮೂಲಕ ಮೊಹಮ್ಮದ್ ಶಮಿ ಉತ್ತಮ ಆಟ ಪ್ರದರ್ಶಿಸಿದರೆ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತ್ರ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಮಾತ್ರ ಶುಭ ಹಾರೈಸಿದ್ದರು. ಮೊಹಮ್ಮದ್ ಶಮಿ ಅವರ ಹೆಸರು ಹೇಳಲಿಲ್ಲ ಎಂದು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶಮಿ ಆಟ ಭಾರತದ ಗೆಲುವಿಗೆ ಕಾರಣವಲ್ಲವೇ..? ಇದರಲ್ಲೂ ಜಾತಿ ರಾಜಕೀಯನಾ..? ಎಂದು ಸಚಿವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊಹಮ್ಮದ್ ಶಮಿ ಹೆಸರನ್ನು ಸೇರಿಸಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಚಿವರ ಮೊದಲ ಟ್ವೀಟ್
ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ ಹ
ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ @imvkohli ಹಾಗೂ @Shreyaslyer15 ಅವರಿಗೆ ಅಭಿನಂದನೆಗಳು,
ಫೈನಲ್ ಪಂದ್ಯದಲ್ಲೂ ಗೆಲುವು ನಿಮ್ಮದಾಗಲಿ, ಅಂದರೆ ನಮ್ಮೆಲ್ಲರದಾಗಲಿ, ಶುಭವಾಗಲಿ.
ಕೇಂದ್ರ ಸಚಿವರ ಎರಡನೆಯ ಫೇಸ್ ಬುಕ್ ಪೋಸ್ಟ್
ಅಂದು ಇಂದು ಎಂದೆಂದೂ… ಟೀಂ ಭಾರತ ಜೈ ಹೋ ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮತ್ತು ಅತ್ಯದ್ಭುತ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದ ಮೊಹಮ್ಮದ್ ಶಮಿ ಅವರಿಗೆ ಅಭಿನಂದನೆಗಳು.
ಫೈನಲ್ ಪಂದ್ಯದಲ್ಲೂ ಗೆಲುವು ನಿಮ್ಮದಾಗಲಿ, ಅಂದರೆ ನಮ್ಮೆಲ್ಲರದ್ದಾಗಲಿ. ಶುಭವಾಗಲಿ ಎಂದು ಪ್ರಹ್ಲಾದ್ ಜೋಶಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.