
ಕಲಬುರಗಿ: ಚಲಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ಮೃತಪಟ್ಟಿದ್ದಾರೆ. ಕಲಬುರಗಿಯ ಫರಾಹತಾಬಾದ್ ಬಳಿ ಬಸ್ ನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.
ಏಕಾಏಕಿ ಕುಸಿದು ಬಿದ್ದು ಕಂಡಕ್ಟರ್ ಕಾಶಿನಾಥ್(50) ಮೃತಪಟ್ಟಿದ್ದಾರೆ. ಯಡ್ರಾಮಿ ತಾಲೂಕಿನ ಜವಳಗ ಗ್ರಾಮದ ನಿವಾಸಿಯಾಗಿರುವ ಕಾಶೀನಾಥ್ ನಿನ್ನೆ ಸಂಜೆ ಕಲಬುರಯಿಂದ ಜೇವರ್ಗಿಗೆ ಹೊರಟಿದ್ದ ಬಸ್ ಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಏಕಾಏಕಿ ಕುಸಿದು ಬಿದ್ದು ಕಂಡಕ್ಟರ್ ಕಾಶಿನಾಥ್ ಮೃತಪಟ್ಟಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಪರಿಶೀಲನೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಫರಾಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.