ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ‘ಕಾಂಡೋಮ್’ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ದರ ನಿಗದಿಪಡಿಸಿದರೂ ಸಹ ಅದು ಕೈಗೆಟಕುವಂತೆ ಇರುತ್ತದೆ. ಆದರೆ ಈ ದೇಶದಲ್ಲಿ ಮಾತ್ರ ಕಾಂಡೋಮ್ ಬೆಲೆಯನ್ನು ಊಹಿಸಲೂ ಸಾಧ್ಯವಿಲ್ಲ. ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಕೇಳಿದರೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ.
ಹೌದು, ಲ್ಯಾಟಿನ್ ಅಮೆರಿಕಾದ ದೇಶವಾದ ವೆನಿಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆಯನ್ನು 60 ಸಾವಿರ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದಕ್ಕೆ ಯಾಕೆ ಇಷ್ಟೊಂದು ಬೆಲೆ ಅಂತ ಹುಬ್ಬೇರಿಸುತ್ತೀರಾ ? ಅದಕ್ಕೆ ಕಾರಣವೂ ಇದೆ.
ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ‘ಚಾಮುಂಡಿ’ ಹೋರಿ ಖರೀದಿ
ವೆನೆಜುವೆಲಾದಲ್ಲಿ ಗರ್ಭಪಾತ ವಿರೋಧಿ ಕಾನೂನು ಜಾರಿಯಲ್ಲಿದ್ದು, ಗರ್ಭಪಾತ ಮಾಡಿಸುವವರು ಹಾಗೂ ಅದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಕಾಂಡೋಮ್ ಗಳಿಗೆ ಬೇಡಿಕೆ ಹೆಚ್ಚಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಂಪನಿಗಳು ಕಾಂಡೋಮ್ ಬೆಲೆಯನ್ನು ಇಷ್ಟೊಂದು ಹೆಚ್ಚಳ ಮಾಡಿವೆ. ಕಠಿಣ ಶಿಕ್ಷೆಗೆ ಒಳಗಾಗುವುದಕ್ಕಿಂತ ಹೆಚ್ಚು ಬೆಲೆ ನೀಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವವರು ಈ ದುಬಾರಿ ಬೆಲೆ ತೆತ್ತು ಕಾಂಡೋಮ್ ಖರೀದಿಸುತ್ತಿದ್ದಾರೆ.